ಶೋಭಾ ಮಲ್ಲಿಕಾರ್ಜುನ್ ಕವಿತೆ-ಫ. ಗು ಹಳಕಟ್ಟಿ

ಅರಿವು ಆಚಾರಗಳ ಅಡಿಗಲ್ಲು
ತಿಳಿಹು ತತ್ವಗಳ ತಳಹದಿ
ಬದುಕು ಭಾವನೆಗಳ ಒಡನಾಡಿಯಾಗಬೇಕಿದ್ದ
ವಚನಗಳ ಜಡತ್ವವನ್ನು ಕಳಚಿ
ಜೀವ ಜಲವಾಗಿಸಿ
ಹೆಸರಿಗನ್ವರ್ಥವಾಗಿ ಫಕೀರನಂತೆ
ಊರೂರು ತಿರುಗಿ ವಚನಗಳ ಕಲೆ ಹಾಕಿ
ವಚನ ಪಿತಾಮಹನಾದವನೇ
ಏನೆಂದು ವರ್ಣಿಸಲಿ ನಿನ್ನ ….?
ತಾಳೆಗರಿಯಿಂದ ಗಾಯನದವರೆಗೆ ವಚನಗಳ ಪಥ
ಅದೆಂದು ಆಗಿರಲಿಲ್ಲ ಹೂವಿನ ರಥ
ನಿನ್ನ ಅಸಾಧಾರಣ ಸಮುದ್ರ ಕಾಯಕ
ವಿಶ್ವದೆಲ್ಲೆಡೆ ವಚನಗಳ ಅರಿವಿನ ಸಾರ್ಥಕ
ಏನೆಲ್ಲಾ ಪಾತ್ರಗಳು ನಿನ್ನ ಅಡಿಗಡಿಗೆ
ನಿನ್ನದ ನಿಸ್ವಾರ್ಥದ ನಡಿಗೆ
ಸ್ವಂತ ಸೂರನು ತೊರೆದೆ
ಸೂರ್ಯನೋಪಾದಿಯಲಿ
ತಾನುರಿದು ಜಗಕೆ ಬೆಳಕಾದೆ
ಝಗ ಝಗಿಸಿದೆ ವಚನಗಳ ಹಣತೆ
ಸಾಹಿತ್ಯದ ಅರ್ತಿಯೇ ಸೊಡರೊಳಗಿನ ಒರತೆ
ನಿನ್ನಿಂದ ಪ್ರಕಟಿತ ಹರಿಹರನ ರಗಳೆ
ಮರೆಯಲೆಂದಾದರೂ ಸಾಧ್ಯವೇ ಈ ಇಳೆ
ಲೌಕಿಕ ಮೀರಿದ ಸಾಹಿತ್ಯ ಸೆಳೆತ
ಬಿ ಎಂ ಶ್ರೀಗಳಿಂದ ವಚನ ಗುಮ್ಮಟನೆಂಬ ಬಿರುದಾಂಕಿತ
ಫಕೀರಪ್ಪ ಗುರುಬಸಪ್ಪ ಹಳಕಟ್ಟಿ
ವಚನಗಳ ಉಳಿಸಿ ಹೋದ ಜಗಜಟ್ಟಿ


2 thoughts on “ಶೋಭಾ ಮಲ್ಲಿಕಾರ್ಜುನ್ ಕವಿತೆ-ಫ. ಗು ಹಳಕಟ್ಟಿ

  1. ಹಳಕಟ್ಟಿ ಅವರ ಕುರಿತಾದ ಕವಿತೆ ಅಲ್ಪದರಲ್ಲೇ ಮಹಾದರ್ಶನವನ್ನು ಮಾಡಿಸಿಕೊಡುತ್ತದೆ

Leave a Reply

Back To Top