ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ ಅವರ
ಗಜಲ್
ವಾಸಿಯಾಗದ ರೋಗಕೆ ಮದ್ದನು ಕೊಟ್ಟವನು ನೀನು
ಹಾಸಬೀರುತ ಮನಸಿನಲಿ ನೆಮ್ಮದಿ ಇಟ್ಟವನು ನೀನು
ಜೊತೆಗೆ ದೇವರಂತೆ ನೀನಿರುವಾಗ ಚಿಂತೆಯೇಕೆ ಹೇಳು
ಮತಿಗೆಟ್ಟು ಹೋದಾಗ ವಿಶ್ವಾಸವೃಕ್ಷ ನೆಟ್ಟವನು ನೀನು
ಕಾಯಿಲೆಗಳ ಗೂಡಾಗಿ ಅವಿರತ ಶರೀರ ಬಳಲಿತಲ್ಲ
ಹಯದಂತೆ ಕಷ್ಟಗಳನು ದೂರತಳ್ಳಿ ಬಿಟ್ಟವನು ನೀನು
ಧೈರ್ಯವನು ತುಂಬುತ ನೋವು ಗುಣಪಡಿಸಿದೆ ಸಖ
ಕಾರ್ಯದಲಿ ಯಶಸಿಗೆ ಹರಸಾಹಸ ಪಟ್ಟವನು ನೀನು
ಜೀವವನು ರಕ್ಷಿಸುತ ಅಂಬರದಿ ಮೆರೆಸಿದೆ ಧನ್ವಂತರಿ
ಧಾವಿಸಿದ ಪ್ರಾಣದುಳಿವಿಗೆ ಪಣ ತೊಟ್ಟವನು ನೀನು
ಶಂಕರಾನಂದ ಹೆಬ್ಬಾಳ
ಗಜಲ್ ತುಂಬಾ ಪ್ರಸ್ತುತ, ಅರ್ಥಪೂರ್ಣವೂ ಆಗಿದೆ ಸರ್ ಅಭಿನಂದನೆಗಳು