ಪರಮೇಶ್ವರಪ್ಪ ಕುದರಿ ಅವರ ಕನ್ನಡ ಶಾಯಿರಿಗಳು

ಕೆಲವರು ಪ್ರೀತಿ ಮಾಡ್ತಾರ ಮಂದಿ
ನೋಡ್ಲಿ‌ ಅಂತ
ನಾನೂ ಸ್ವಲ್ಪ ಜಾಸ್ತೀನ ಮಾಡಿದ್ದೆ!
ಈಗ ತಣ್ಣಗಾಗೇನಿ ನಾ,  ಯಾಕಂದ್ರ
ಮೊನ್ನೆ ಅಕಿ ಬ್ಯಾರೆದವ್ನ
ಪ್ರೀತಿ ಮಾಡೂದು ಕಣ್ಣಾರೆ ನೋಡ್ದೆ!!

ಜಗತ್ತನ್ಯಾಗ ನೀನ ಖುಷಿ
ಖುಷಿಯಾಗಿರಾಕ ನಿನಗ ಹಕ್ಕ ಐತಿ!
ಆದ್ರ ನಾ ಏನ್ಮಾಡ್ಲಿ ನನಗ ನಿನ್ನ
ಬಿಟ್ರ ಬ್ಯಾರೇ ಜಗತ್ತ ಇಲ್ಲ!!

ನಗುವವರ ಹೃದಯದಾಗ ನೋವೂ ಇರತೈತಿ
ನಗುವ ಕಣ್ಣಿನೊಳಗ ದುಃಖಾನೂ ಇರತೈತಿ!
ನಿನ್ನ ನಗಿ ಮಾತ್ರ ಯಾವತ್ತೂ ಮಾಸದಂಗಿರಲಿ
ಯಾಕಂದ್ರ ಅದು ನನಗ ಬಾಳ ಹುಚ್ಚ ಹಿಡಸೈತಿ!!

ಬಾಳ ಮಂದಿ ಹೇಳ್ತಾರ ನನಗ ನೀವು
ಬಾಳ ಚಂದ ಶಾಯಿರಿ ಬರೀತೀರಿ ಅಂತ!
ನಾನಂದೆ , ಬಾಳ ಚಂದ ನಾನಿಲ್ಲ ನನ್ನಿಂದ
ಬರಸಗೊಳಾಕಿ ಬಾಳ ಚಂದ ಅದಾಳ ಅಂತ!!

———————————–

4 thoughts on “ಪರಮೇಶ್ವರಪ್ಪ ಕುದರಿ ಅವರ ಕನ್ನಡ ಶಾಯಿರಿಗಳು

  1. ವಾವ್ ಚೆಂದ ಚೆಂದದ ಶಾಯಿರಿಗಳು…ಲೇಖಕರಿಗೂ ಸಂಗಾತಿಗೂ ಹಾರ್ದಿಕ ಅಭಿನಂದನೆಗಳು ಸಾರ್

  2. ಒಂದಕ್ಕಿಂತ ಒಂದು ಚಂದದ ಶಾಯಿರಿ ಸರ್ ಅಭಿನಂದನೆಗಳು

Leave a Reply

Back To Top