ಶೃತಿ ರುದ್ರಾಗ್ನಿ ಅವರ ಕವಿತೆ-ಶಬ್ದ ಮಾಲೆ

ಎಷ್ಟೊಂದು
ಬಣ್ಣಗಳ
ಬಳೆದುಕೊಂಡ
ಬರಹವೇ
ನನ್ನ
ಕೈಗಳಿಗೆ
ಬಂಗಾರದ
ಅಲಂಕಾರಿಕ
ಬಳೆಗಳಾಗಿತ್ತು…

ಒಂದೊಂದು
ಪದಗಳ
ಪರಿಶೀಲಿಸಿ,

ಪರಿವಿಡಿ
ಪ್ರೇಮ ಮುತ್ತುಗಳ
ಪೋಣಿಸಿ,

ಬರೆವ
ಪದ್ಯಗಳ
ಪವಿತ್ರತೆಯೇ
ಹೆಣ್ಣಾಗಿ
ಶೃಂಗರಿಸಿತ್ತು…

ಸಾಕೆನ್ನುವ
ಸಾಲುಗಳ
ಸೆಳೆದು
ಸರಸ
ಸಲ್ಲಾಪಕ್ಕೆ
ಇಳಿಸುವ
ನನ್ನೊಳಗಿನ
ಇಳೆಗೆ
ಹೆಸರೇನೆಂದು
ಇಡಲಿ…

ಶೀರ್ಷಿಕೆಯೇ ಇಲ್ಲದ
ಶಬ್ದ ಮಾಲೆ ಕಟ್ಟಿರುವೆ ನಾನಿಲ್ಲಿ…


2 thoughts on “ಶೃತಿ ರುದ್ರಾಗ್ನಿ ಅವರ ಕವಿತೆ-ಶಬ್ದ ಮಾಲೆ

  1. ಕೃತಿ ಚೌರ್ಯ ಮಾಡಿ ಸಿಕ್ಕಾಕಿಕೊಂಡು ಕೊನೆಗೆ ಪ್ರತಿಲಿಪಿಯಲ್ಲಿ ಬ್ಯಾನ್ ಆದ ಹೆಂಗಸಲ್ವಾ? ಥೂ ಇಂತವಳ ಬರಹ ಹಾಕ್ತೀರಂದ್ರೆ ಈ ವೆಬ್ಸೈಟ್ ಅದೆಂತ **ದ್ ವೆಬ್

Leave a Reply

Back To Top