ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಶೂನ್ಯದ ಪರಿಕಲ್ಪನೆ
ಶೂನ್ಯ ಎಂದರೆ ಬರಿದು
ಶೂನ್ಯದೊಳು ಕಾಲ ಗೌಪ್ಯವಾಗಿಹುದು
ಶೂನ್ಯ ಎಂದರೆ ಖಾಲಿ
ಶೂನ್ಯದೊಳು ತೂಗಿದೆ ಜೀವನ ಜೋಕಾಲಿ
ಶೂನ್ಯ ಎಂದರೆ ಮೌನ
ಶೂನ್ಯ ಎಲ್ಲಾ ಜಂಜಾಟಗಳ ಶಮನ
ಶೂನ್ಯ ಎಂದರೆ ನಿರ್ವಾತ
ಶೂನ್ಯ ಶಾಂತಿಯ ಸಂಕೇತ
ಶೂನ್ಯಕ್ಕೆ ಬೆಲೆ ಇಲ್ಲ
ಶೂನ್ಯದ ಹಿಂದಿರುವ ಅಂಕೆ ಬೆಲೆಬಾಳಿತಲ್ಲ
ಶೂನ್ಯ ಎಂದರೆ ಏನಿಲ್ಲ
ಶೂನ್ಯದೊಳು ವಿಶ್ವದ ಸೃಷ್ಟಿ ಅಡಗಿದೆಯಲ್ಲ
ಶಾಲಿನಿ ಕೆಮ್ಮಣ್ಣು