ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ಪ್ರೀತಿಯ ಪ್ರಕಟಣೆ
ಅರಳುವ ಹೂವಿನಲ್ಲಿ
ನೀ ನನ್ನ ಮಕರಂದ
ಸವಿಯುವ ಜೇನಿನಂತೆ
ನಾ ನಿನ್ನ ಮನದಂದ
ಸ್ಪರ್ಶವೋ ಪರಾಗವೋ
ಕಚಗುಳಿಯ ಆನಂದ
ತಂಪಗೆ ಗಾಳಿಯಲ್ಲಿ
ಗುಡ್ಡದ ತುದಿಯಲ್ಲಿ
ಬಾರೋ ನಡೆದಾಡುವ.
ಕಾಡಿನ ಹಾದಿಯಲ್ಲಿ
ಮಳೆಯ ನೀರಿನಲ್ಲಿ
ಬಾರೋ ನಲಿದಾಡುವ.
ಕಾಡಿಗೆ ಕಣ್ಣಲೀ
ಗೆಜ್ಜೆಯ ನೋಡುತ
ನೀ ಹೆಜ್ಜೆಯ ಇರಿಸುವೆ.
ಆನಿನ್ನ ಹೆಬ್ಬೆರಳ ರೇಖೆಯ
ಹೃದಯಕೆ ಅಂಟಿಸಿ
ಪ್ರಕಟಣೆ ಮಾಡುವೆ.
ಪ್ರೀತಿಯು ಮೆಲ್ಲನೆ
ನೀಡಿತು ಸೂಚನೆ
ಹೃದಯಕೆ ಒರಗುವ.
ಕನಸುಗಳು ಒಂದಾಗಿ
ಮನಸಲ್ಲಿ ಕುಣಿದಾಡಿ
ಬಾನಲ್ಲಿ ತೇಲುವ.
ಮನ್ಸೂರ್ ಮೂಲ್ಕಿ
ಸೂಪರ್