ಕಾವ್ಯ ಸಂಗಾತಿ
ಸುಶಾಂತ್ ಪೂಜಾರಿ ಕನ್ನಡಿಕಟ್ಟೆ
ಮುನಿಸು
ಸಿಡಿಲಿನ ಆರ್ಭಟ ತರವಲ್ಲ ಗೆಳತಿ
ಬೆಸೆದುಕೊಂಡ ಹೃದಯ
ಭೂಮಿಯ ಮುಟ್ಟಿದ ಮಳೆಯ
ಹನಿಯ ತನುವಿನಂತಿರಲು
ಮೊಳಕೆಯೊಡೆದ ಸಸಿಯಂತೆ
ಹಸಿರಾಗಿರಲು….
ತೋರಬೇಕಿತ್ತು ಮುನಿಸುಬಿಟ್ಟು
ಒಲವಿನ ಪದದೊಳಗೆ
ಬಂಧಿಯಾಗುವ ಮಾತೊಂದನು
ಅಂತರಾಳವು ಕುಣಿಯುವ
ನುಡಿಯೊಂದನು ಮತ್ತೆ ಮತ್ತೆ
ನಾವಿಬ್ಬರೂ ಜೊತೆಯಾಗುವಂತೆ….
ಸಾಗರದೊಳಗಿನ ಮುತ್ತಿನಂತೆ ನೀ ಹೊಳೆಯುತ್ತಿರಬೇಕು ಮುಖಬಿಂಬ
ನಗುವಿಗೆ ಆರತಿಯಾಗಿ ಕಣ್ಣ
ನೋಟಕೆ ಬೆಳಕಾಗಿ ಬದುಕಿನ
ನಡೆಗೆ ದಾರಿಯಾಗುವಂತೆ….
ಒಡನೆಯೆ ಒಲವಿನೊಳೆಗೆ
ನೆಲೆಯಾಗಿಬಿಡು ಹೊಸತನಕ್ಕೆ
ಅನುಭವವಾಗಿ ಬಂದುಬಿಡು
ಪ್ರತಿದಿನವೂ ಪ್ರತಿಕ್ಷಣವೂ
ಜೀವನದ ಭಾವವಾಗಿ ಜೀವದ
ಉಸಿರಾಗಿರಲು….
ಸುಶಾಂತ್ ಪೂಜಾರಿ ಕನ್ನಡಿಕಟ್ಟೆ
‘