ಅಶ್ವಿನಿ ಕುಲಾಲ್ ಅವರ ಕವಿತೆ-‘ಸೋನೆ ಮಳೆಯ ಅಪ್ಪುಗೆಯಲಿ’

ಸುರಿಯುತಿಹ ಸೋನೆ ಮಳೆಯಲಿ
ನೆನೆಯುತ್ತಿಹೆನು ನಿನ್ನನ್ನೇ
ಭಾಸವಾದಂತಿದೆ ನನ್ನಲಿ
ಸ್ಪರ್ಶಿಸುತಿಹೆ ನೀ ನನ್ನನ್ನೇ

ಕಲ್ಪನಾ ಲೋಕದೀ ಧರೆಗಿಳಿದು ಬಂದು
ಮಳೆಯ ರೂಪದೀ ಮುತ್ತಿಕ್ಕುತ್ತಿರುವೆ ನೀನಿಂದು
ನಾಚಿಕೆಯಲಿ ಕೆಂಪಾಗಿಹೆನು ನಾನಿಂದು
ನಿನ್ನಯ ಅನಿರೀಕ್ಷಿತ ಆಗಮನ ಖುಷಿಗೆಂದು

ವರುಣ ನ ಈ ಸಿಹಿ ಅಪ್ಪುಗೆಯಲಿ
ಛತ್ರಿಯ ಹಿಡಿದಿರುವೆ ನಮ್ಮೀ ನಡುವಲಿ
ನಿನ್ನದೇ ಪ್ರತಿಬಿಂಬ ಕೊಡೆಯಂಚಿನ ಹನಿಯಲಿ
ನಿನ್ನನ್ನೇ ಕನವರಿಸುತ್ತಿರುವೆನು ಮನದ ಅಂತರಾಳದಲಿ

ಮನದೊಳಡಗಿದ ಕಲ್ಪನೆಯ ಚೆಲುವನೇ
ನನ್ನ ಬರವಣಿಗೆಯ ರುವಾರಿಯು ನೀನೇ
ಕಲ್ಪನಾ ಲೋಕದಲ್ಲಿರುವ ನನ್ನೊಲವಿನ ರಾಜಕುಮಾರನೇ
ಪ್ರತಿಕ್ಷಣ ನನ್ನೀ ವಾಸ್ತವದಲ್ಲಿ ರುಜು ಹಾಕುತ್ತಿರು ನನ್ನೀ ಮನದರಸನೇ.


                                                            

Leave a Reply

Back To Top