ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ
ಹೊಂಗಿರಣದ ನಗು
ನೇಸರನಿವನು
ಬೇಸರವಿಲ್ಲದವನು
ಸದಾ ಹೊಸತವನು
ಹೊಳಪು ಕೊಡುವನು
ಭೂಮಿಯಲ್ಲಿ ಬೆಳಕು
ಚೆಲ್ಲುವ ಹೊಂಗಿರಣನು
ಬದುಕಿನ ಕಾಂತಿಯ
ಹೊರಹೊಮ್ಮಿಸುವನು
ನೇಸರವ ನೋಡುತ
ಬಿಸಿಲ ಕಾಂತಿ ಅನುಭವಿಸುತ
ಪಲ್ಲಂಗದಲ್ಲಿ ಕುಳಿತಿರಲು
ಬಿಸಿ ಬಿಸಿ ಕಾಫಿ ಅಲ್ಲಿಗೆ ಬಂತು
ಹರುಷವ ವ್ಯಕ್ತಪಡಿಸಿದೆ
ನನ್ನವಳಿಗೆ..ನಗೆಯ
ಹೊಂಗಿರಣ ತೂರಿ ಬಂತು
ಅವಳ ಚೆಲುವ ಮೊಗದಿಂದ!!!!
ಗಾಯತ್ರಿ ಎಸ್ ಕೆ