ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಮುರಳಿಯ ನೆನೆಸುತ ಒಲವಿನ ಓಲೆಯ
ಬರೆದೆಯಾ ರಾಧೆ
ಬೆರಳಲಿ ಲೇಖನಿಯ ಹಿಡಿಯುತ ಮನವ
ತೆರೆದೆಯಾ ರಾಧೆ
ತೊಟ್ಟಿರುವೆ ಬಣ್ಣದ ಬಳೆಗಳ ಕೈಗಳಿಗೆ
ಶೋಭೆ ತಂದಿದೆಯಲ್ಲವೇ
ಇಟ್ಟಿರುವ ನವಿಲಿನ ಗರಿಯಲಿ ನಲ್ಲನ
ಕರೆದೆಯಾ ರಾಧೆ
ಧರಿಸಿದೆ ಪ್ರೇಮದ ಉಂಗುರವ ತೋರುತ
ಎದೆಯ ಬಯಕೆಗಳ
ಬೆರೆಸುತ ಅನುರಾಗ ಕವಿತೆಯ ಪದಗಳಾಗಿ
ಎರೆದೆಯಾ ರಾಧೆ
ಮಧುರ ಭಾವಗಳು ಮೂಡುತ ಗುಲಾಬಿ
ಹೂವನು ತಂದಿರುವೆ
ಅಧರದ ಸವಿಯನು ಮೆಲ್ಲುತ ನೆನಪಲಿ
ಮೆರೆದೆಯಾ ರಾಧೆ
ಮರಳಿ ಬರುವನೋ ಎಂಬಂತೆ ಕಾತುರವು
ರಾಧೆಯ ಕಂಗಳಲಿ
ಹೊರಳುತ ಇನಿದನಿಯ ಕೊಳಲಿನ ನಾದದಿ
ಪೊರೆದೆಯಾ ರಾಧೆ
ಅನುರಾಧಾ ರಾಜೀವ್ ಸುರತ್ಕಲ್
ತುಂಬಾ ಚೆನ್ನಾಗಿದೆ
ಮುರಳಿಗಾನಕೆ ಮರುಳಾಗದವರುಂಟೆ
ಮರಳಿ ತೆರಳದವರುಂಟೇ…
ಸುಂದರವಾದ ಗಜಲ್
Super