“ಉರುಳಿದ ಕಾಲಚಕ್ರ” ಸಣ್ಣ ಕಥೆ-ಅಶ್ವಿನಿ ಕುಲಾಲ್ ಕಡ್ತಲ

ಮುದ್ದು ಮಾಡಿ ಬೆಳೆಸಿದ ಮಗ ಕೈತಪ್ಪಿ ಹೋದ ಎಂಬ ದುಃಖದಿಂದಲೇ ಮೂಲೆ ಸೇರಿದರು ಅರ್ಚನಾ . ಈಗ ಕಾಡು ಬಾ ಅನ್ನುತ್ತೆ ಮಾಡು ಹೋಗುವಂತೆ ಅಂತ ಕಾಲ ನಮ್ಮದು. ದುಡಿಯಲು ಶಕ್ತಿ ಇಲ್ಲ ತಂದು ತಿನ್ನಲು ಕೈಯಲ್ಲಿ ಕಾಸಿಲ್ಲ ಒಟ್ಟಾರೆ ಜೀವನ ಎಷ್ಟೋ ದಿನ ದೂಡುತ್ತೋ
ಅಷ್ಟು ದಿನ ನಮ್ಮ ಬದುಕು ಎಂದು ಬೇಸತ್ತು ನೋಡಿದರು ಅನಂತಯ್ಯನವರು . ಗಂಡನ ಈ ಮಾತನ್ನು ಕೇಳಿದ ಕೂಡಲೇ ಅರ್ಚನಾಳ ಕಣ್ಣು ತುಂಬಿ ಕಣ್ಣೀರು ಕೆನ್ನೆ ಮೇಲೆ ಹರಿಯಿತು. ಕಣ್ಣೀರಲ್ಲೇ ಕೈ ತೊಳೆಯುವ ಈ ದಂಪತಿಗಳಿಗೆ ಒಬ್ಬನೇ ಸುಪುತ್ರ ಆತನೇ ಇವರ ಪ್ರಪಂಚ. ರವಿಗೂ ತಂದೆ ತಾಯಿ ಎಂದರೆ ಪ್ರಾಣ. ಎಲ್ಲರ ಮೆಚ್ಚುಗೆಗೆ ಪಾತ್ರರಾದವನು. ಕಲಿಕೆಯಲ್ಲೂ ಪ್ರಥಮ, ಕ್ರೀಡೆ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲದರಲ್ಲೂ ಈತನೇ ಮೊದಲಿಂದ ಮೊದಲಿಗನಾಗಿದ್ದ. ಪದವಿ ಪೂರ್ವದ ಶಿಕ್ಷಣದ ನಂತರ ಆತನಿಗೆ ಅಲ್ಲೇ ಗ್ರಾಮದಲ್ಲಿ ಗುಮಾಸ್ತನಾಗಿ ಕೆಲಸ ದೊರಕಿತು. ಅದರಲ್ಲಿ ತೃಪ್ತಿ ಇಲ್ಲದ ಆತನಿಗೆ ಇನ್ನೂ ಕಲಿಯಲು ಮನಸ್ಸಿದೆ ಎಂಬ ಬೇಡಿಕೆಯನ್ನು ತಂದೆ ತಾಯಿಯ ಎದುರಿಗಿಟ್ಟ.
ಆತನನ್ನು ಮುಂದೆ ಕಲಿಸುವಷ್ಟು ಶ್ರೀಮಂತಿಕೆ ಇಲ್ಲದಿದ್ದರೂ ಕೂಡ ಮಗನನ್ನು ನಿರಾಸೆಗೊಳಿಸಬಾರದು ಎಂದು ಕಷ್ಟಪಟ್ಟು ಅಲ್ಲಿ ಇಲ್ಲಿ ಕೂಲಿ ಮಾಡಿ ಮಗನನ್ನು ಪಟ್ಟಣಕ್ಕೆ ಕಳಿಸಿದ್ದರು
ರವಿಯ ಕಲಿಕೆಯು ಮುಗಿದು ಅವನೆಂದುಕೊಂಡಂತೆ ಒಳ್ಳೆ ಕಂಪೆನಿಯಲ್ಲಿ ಕೆಲಸ ಸಿಕ್ಕಿತು ಹಳ್ಳಿಯಲ್ಲಿದ್ದ ತಂದೆ ತಾಯಿಯನ್ನು ಪಟ್ಟಣಕ್ಕೆ ಕರೆ ತಂದು, ಸುಂದರವಾದ ಬದುಕು ಪ್ರಾರಂಭಿಸಿದರು .ರವಿಗೆ ಅದೇ ಕಂಪನಿಯಲ್ಲಿರುವ ಚಿತ್ರಾಳ ಮೇಲೆ ಸ್ನೇಹವಾಗಿ, ಇದು ಪ್ರೀತಿಗೆ ತಿರುಗಿ ಮನೆಯವರೆಲ್ಲರ ಒಪ್ಪಿಗೆ ಪಡೆದು, ಮದುವೆಯೂ ಅದ್ದೂರಿಯಾಗಿ ನಡೆಯಿತು . ನನಗೆ ಸಂಗಾತಿಯಾಗಿ ಬಂದ ಚಿತ್ರಾ ಅಪ್ಪ-ಅಮ್ಮನನ್ನು ಒಳ್ಳೆಯ ರೀತಿ ನೋಡಿಕೊಂಡರೆ ಸಾಕು . ಚಿತ್ರಾ ಮನೆ ಸೊಸೆಯಾದ ಮೇಲೆ ಮನೆಯ ಸಂತೋಷ ಎರಡು ಪಟ್ಟು ಹೆಚ್ಚಾಯಿತು. ಚಿತ್ರಾ ಅತ್ತೆ ಮಾವರಿಗಂತು ಅಚ್ಚುಮೆಚ್ಚಿನ ಸೊಸೆಯಾಗಿದ್ದಳು. ಈ ಮನೆಗೆ ಬೇಗ ಹೊಂದಿಕೊಂಡಳು ಚಿತ್ರಾ ಕೆಲಸಕ್ಕೆ ಹೋಗಿ ಬರುವಾಗ ಅಡುಗೆ ಕೆಲಸವನ್ನೆಲ್ಲ ಅರ್ಚನಾರವರು ಮಾಡಿ ಮುಗಿಸುತ್ತಿದ್ದರು. ಸುಖಿ ಸಂಸಾರ ಎಂದರೆ ತಪ್ಪಾಗಲಾರದು. ಮನೆಯ ಸಂಭ್ರಮ ದುಪ್ಪಟ್ಟುಗೊಳಿಸಲು ವಂಶದ ಕುಡಿಯ ಆಗಮನ ಎಂದಾಗ ಹಿರಿಜೀವಗಳು. ಕುಣಿದು ಕುಪ್ಪಳಿಸಿದರು. ಗರ್ಭಿಣಿಯಾಗಿದ್ದ ಚಿತ್ರಾಳಿಗೆ ಒಂದು ಚಿಕ್ಕ ಕೆಲಸ ಕೂಡ ಕೊಡುತ್ತಿರಲಿಲ್ಲ.
ರವಿ ಅಂತೂ ತುಂಬಾ ಸಂತಸದಿಂದಿದ್ದ ,ರವಿ ಚಿತ್ರಾ ತಮ್ಮ ಮಗುವಿನ ಬಗ್ಗೆ ಕನಸು ಕಾಣತೊಡಗಿದರು. ಮನೆ ತುಂಬಾ ಸಂತಸದ ವಾತಾವರಣವಾಗಿತ್ತು. ಚಿತ್ರಾಳ ಸೀಮಂತ ತುಂಬಾ ಅದ್ದೂರಿಯಾಗಿ ನಡೆಯಿತು. ಚಿತ್ರಾ ಗಂಡು ಮಗುವಿಗೆ ಜನ್ಮ ನೀಡಿದಳು. ಚಿತ್ರಾ ಬಾಣಂತನಕ್ಕೆ ತವರು ಮನೆಗೆ ಹೋದಳು. ಆಗಂತು ಮನೇಲಿ ಅರ್ಚನಾ ಅನಂತಯ್ಯವರಿಗೆ ದಿನದೂಡುವುದೇ ಕಷ್ಟವಾಯಿತು. ಬಾಣಂತನ ಮುಗಿಸಿ ಚಿತ್ರಾ ಮನೆಗೆ ಬಂದಾಗ ಮನೆಯ ವಾತಾವರಣ ಸ್ವರ್ಗವಾಗಿತ್ತು. ಮೊಮ್ಮಗನೊಟ್ಟಿಗೆ ಆಟ ಆಡುತ್ತಾ ಕಾಲ ಕಳೆಯುತ್ತಿದ್ದರು. ಈ ದಂಪತಿಗಳು ರವಿ ಚಿತ್ರಾ ಕೆಲಸಕ್ಕೆ ಹೋಗಿ ಬರುವವರೆಗೆ ಮಗುವನ್ನು ನೋಡಿಕೊಳ್ಳುತ್ತಿದ್ದರು.
ಚಿತ್ರಾಳ ತಾಯಿಯ ಆರೋಗ್ಯ ಹದಗೆಟ್ಟಿತ್ತು. ಚಿತ್ರಾಳ ತಂಗಿ ಚೇತನ ತುಂಬು ಗರ್ಭಿಣಿ, ಹಾಗಾಗಿ ಆಕೆಯ ಬಾಣಂತನ ಯಾರು ಮಾಡುವುದು ಅನ್ನೋದು ಒಂದು ದೊಡ್ಡ ತಲೆನೋವಾಗಿತ್ತು. ಆದರೆ ಅರ್ಚನಾರವರು ಚೇತನಾಳ ಬಾಣಂತನ ನಾನು ಮಾಡುತ್ತೇನೆ. ಚೇತನಾ ನನ್ನ ಮಗಳಿದ್ದಂತೆ ಎಂದು ಅವರು ಹೇಳಿದಂತೆ ಚೇತನಾಳ ಬಾಣಂತನ ಮಾಡಿದರು.ಚಿತ್ರಾಳ ತಾಯಿ ದಿನ ದಿನಕ್ಕೆ ಗುಣಮುಖರಾದರು. ಚೇತನ ಅವರ ತಾಯಿ ಮನೆಗೆ ನಡೆದಳು. ಚೇತನ ತಾಯಿ ಮನೆಗೆ ಹೋಗುವ ಮೊದಲೇ ಬಂಗಾರದಂಥ ಮನೆಯಲ್ಲಿ ಛಿದ್ರ ಮಾಡಿದ್ದರು.
ಚೇತನಾಗೆ ರವಿ ಅಂದ್ರೆ ಮೊದಲಿಂದಲೂ ತುಂಬಾ ಇಷ್ಟ ಇತ್ತು
ರವಿ ಚಿತ್ರಾರು ಸ್ನೇಹಿತರಾಗಿದ್ದಾಗ , ರವಿ ಚಿತ್ರಾಳ ಮನೆಗೆ ಹೋಗುತ್ತಿದ್ದಾಗಲೇ ಚೇತನಾ ರವಿಯನ್ನು ಇಷ್ಟಪಟ್ಟಿದ್ದಳು. ರವಿ ಚಿತ್ರಾರ ಪ್ರೀತಿಯ ವಿಷಯ ತಿಳಿದ ಮೇಲೂ ಕೂಡ ಚೇತನಾ ಚಿತ್ರಾ ಹತ್ತಿರ ಮುಚ್ಚು ಮರೆ ಇಲ್ಲದೆ ರವಿಯನ್ನು ತನಗೆ ಬಿಟ್ಟುಕೊಡು ಎಂದು ಕೇಳಿದಳು. ಚಿತ್ರಾಳಿಗೆ ಗೆ ಏನು ಹೇಳಬೇಕೆಂದು ತಿಳಿಯಲಿಲ್ಲ . ತಂಗಿಯ ಕೆನ್ನೆಗೆ ಎರಡು ಬಾರಿಸಬೇಕು ಎಂದುಕೊಂಡಳು. ಆದರೆ ತಂಗಿ ಎಂಬ ಮಮತೆಯಿಂದ ಏನನ್ನು ಹೇಳದೆ ಒಳ ನಡೆದಳು
ನಂತರ ಚೇತನಾ ಅಷ್ಟಕ್ಕೇ ಬಿಡದೆ ತಾನೆ ಹೋಗಿ ರವಿಗೆ ತನ್ನ ಪ್ರೀತಿಯ ಬಗ್ಗೆ ತಿಳಿಸಿದಳು. ರವಿ ಮಾತ್ರ ಇದಕ್ಕೆ ಜಗ್ಗಲಿಲ್ಲ. ನಾನು ಪ್ರೀತಿಸುತ್ತಿರುವುದು ನಿನ್ನ ಅಕ್ಕ ಚಿತ್ರಾಳನ್ನು ಅವಳೇ ನನಗೆ ಪ್ರಾಣ ನಿನ್ನನ್ನು ನಾನು ತಂಗಿ ಎಂದು ಭಾವಿಸಿದ್ದೇನೆ. ನಿನ್ನನ್ನು ನಾನು ಬೇರೆ ಯಾವ ದೃಷ್ಟಿಯಲ್ಲೂ ನೋಡಲಿಲ್ಲ . ಚಿತ್ರಾಳನ್ನು ಬಿಟ್ಟು ನಾನು ಬೇರೆ ಯಾರನ್ನು ಕೂಡ ಮದುವೆ ಆಗಲ್ಲ . ನಿನಗೆ ನನ್ನ ಮೇಲೆ ನಿಜವಾಗಿ ಪ್ರೀತಿ ಇದ್ದರೆ ಮದುವೆಯನ್ನು ಸಂತೋಷವಾಗಿ ನಡೆಸಿಕೊಡು ಎಂದು ರವಿ ಹೇಳಿದ್ದನು.
ಇಲ್ಲಾಂದ್ರೆ ನನ್ನ ಮತ್ತು ಚಿತ್ರಾಳನ್ನು ಕಳೆದುಕೊಂಡು ಅನಾಥ ಯಾಗುವೆ ಎಂದನು . ಚೇತನ ಕೊನೆಗೆ ತನ್ನ ನಿರ್ಧಾರ ಬದಲಿಸಿ ಇಬ್ಬರಲ್ಲಿ ಕ್ಷಮೆ ಕೇಳಿದಳು . ರವಿ ಚಿತ್ರಾಳ ಮದುವೆ ಸುಸೂತ್ರವನ್ನು ನಡೆಯಿತು. ಇವರಿಬ್ಬರ ಮದುವೆಯಲ್ಲಿ ವಿಜೇತ್ ಚೇತನಾಳನ್ನು ಇಷ್ಟಪಟ್ಟಿದ್ದ ಮೂರು ತಿಂಗಳ ನಂತರ ವಿಜೇತ್ ಚೇತನಾಳ ಮದುವೆ ಅದ್ದೂರಿಯಲ್ಲಿ ನಡೆದು. ಚೇತನಾ ರವಿಯನ್ನು ಮರೆತು ತನ್ನ ದಾಂಪತ್ಯ ಖುಷಿಯಾಗಿದ್ದಳು.
ಈಗ ಬಾಣಂತನಕ್ಕೆಂದು ರವಿ ಮನೆಗೆ ಬಂದ ಚೇತನಾ ಇವರಿಬ್ಬರ ಅನ್ಯೋನ್ಯತೆ ಮತ್ತು ಸಂತೋಷವನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಳು .

ರವಿ ಗೆ ವಿದೇಶದಲ್ಲಿ ಕೆಲಸ ಸಿಕ್ಕಿತು. ಆತ ಅತ್ತ ಕಡೆ ತೆರಳಿದ…ಇತ್ತ ಚೇತನಾ ಅತ್ತೆ ಸೊಸೆಯರ ನಡುವೆ ಜಗಳ ತಂದಿಟ್ಟಳು . ಚಿತ್ರಾ ಗಂಡನಿಗೆ ಕರೆ ಮಾಡಿ ನಾನು ಇಲ್ಲಿ ಇರಲ್ಲ. ಅತ್ತೆ ಮಾವನ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನನ್ನನ್ನು ನಿಮ್ಮಲ್ಲಿಗೆ ಕರೆದುಕೊಂಡು ಹೋಗಿ ಎಂದು ಗೋಗರೆದಳು.

ರವಿ ಊರಿಗೆ ಬಂದಾಗ ಅಪ್ಪ ಅಮ್ಮನ ಹತ್ತಿರ ತನ್ನ ಮಡದಿಯನ್ನು ವಿದೇಶಕ್ಕೆ ಕರೆದುಕೊಂಡು ಹೋಗುತ್ತೇನೆ. ಇಲ್ಲಿ ನಾನಿಲ್ಲದಾಗ ಚಿತ್ರಾಳಿಗೆ ತುಂಬಾ ಕಾಟ ಕೊಟ್ಟಿದ್ದೀರಾ ಅಂತ ಒರಟಾಗಿ ಮಾತಾಡಿದ….ಮಗ ಈ ರೀತಿ ಮಾತಾಡಿದ್ದನ್ನು ನೋಡಿ ದಂಪತಿಗಳಿಬ್ಬರು ಮರೆಯಲ್ಲಿ ಅತ್ತರು. ನೀವು ಇಲ್ಲೇ ಇರಿ ನಿಮ್ಮನ್ನು ನೋಡಲು ಕೆಲಸದವಳನ್ನು ನೇಮಿಸುತ್ತೇನೆ. ತಿಂಗಳಿಗೆ ಇಷ್ಟು ಅಂತ ನಿಮ್ಮ ಖರ್ಚಿನ ಹಣವನ್ನು ಕಳಿಸುತ್ತೇನೆ. ಎಂದು ದರ್ಪದಿ ನುಡಿದ.
ಚೇತನಾಳಿಗೆ ರವಿ ಚಿತ್ರಾರು ಒಟ್ಟಿಗೆ ಇರುವುದು ಇಷ್ಟವಿರಲಿಲ್ಲ. ಅದಕ್ಕೆ ಅವಳು ಭಾವ ಅಕ್ಕನನ್ನು ನಿಮ್ಮೊಡನೆ ಕರೆದುಕೊಂಡು ಹೋದರೆ ಅಲ್ಲಿ ಜೀವನ ತೂಗಿಸಲು ಕಷ್ಟವಾಗುತ್ತದೆ .ಅಕ್ಕ ನಮ್ಮ ಮನೆಯಲ್ಲಿ ಇರಲಿ ಎರಡು ತಿಂಗಳ ನಂತರ ನಾನು ಬೆಂಗಳೂರಿಗೆ ಹೋಗುತ್ತೇನೆ . ಅಮ್ಮ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಾರೆ ನೀವು ಏನು ತೊಂದರೆ ತೆಗೆದುಕೊಳ್ಳಬೇಡಿ ಎಂದಳು. ಇದನೆಲ್ಲ ಕೇಳದೆ ನಾನು ನಿಮ್ಮೊದಿಂಗೆ ಬರುತ್ತೇನೆ ಎಂದು ಚಿತ್ರಾ ಹಠ ಹಿಡಿದಳು.
ರವಿ ಚಿತ್ರಾಳಿಗೆ ತಿಳಿ ಹೇಳುತ್ತಾ ಎರಡು ವರ್ಷದ ನಂತರ ನಿನ್ನನ್ನು ಕರೆದುಕೊಂಡು ಹೋಗುವೆ ಎಂದು ಸಮಾಧಾನಿಸಿದ. ಚೇತನಾ ಒಳಗೊಳಗೆ ಸಂತೋಷ ಪಟ್ಟಳು. ಈ ಮನೆಯಲ್ಲಿ ಇರಲ್ಲಪ್ಪ. ಈ ಮನೆಯಲ್ಲಿ ನಾವಿದ್ದಾರೆ , ನೀನೇ ನೆನಪಾಗ್ತಿಯಾ ಕಣೋ. ನಮ್ಮನ್ನು ಹಳ್ಳಿ ಮನೆಗೆ ಬಿಟ್ಟುಬಿಡು ಎನ್ನುತ್ತಾ ನೊಂದ ಮನಸ್ಸಿನಲ್ಲಿ ಅರ್ಚನಾ. ಸರಿ ಅಮ್ಮ ಎಂದು ಹೇಳುತ್ತಾ ಅವರನ್ನು ಹಳ್ಳಿಗೆ ಕರೆದುಕೊಂಡು ಹೋಗಿ ಬಿಟ್ಟ ರವಿ. ಚಿತ್ರಾ ತವರು ಮನೆ ಸೇರಿದಳು. ರವಿ ವಿದೇಶಕ್ಕೆ ಹೋದನು. ನಂತರ ಚಿತ್ರಾಳಿಗೆ ದಿನದಿಂದ ದಿನಕ್ಕೆ ಎಲ್ಲ ವಿಷಯ ತಿಳಿಯಿತು. ತವರಲ್ಲಿ ತನಗೆ ನೆಮ್ಮದಿ ಇಲ್ಲ. ತಂಗಿಯಿಂದ ತನ್ನ ಜೇನುಗೂಡಿನಂತಿದ್ದ ಸಂಸಾರ ಒಡೆದು ಹೋಯಿತು ನೊಂದಳು. ಆದರೆ ತಿಳಿಯುವ ಹೊತ್ತಿಗೆ ಕಾಲ ಮೀರಿತ್ತು.

ಇತ್ತ ಅನಂತಯ್ಯ ಮತ್ತು ಅರ್ಚನಾ ರವರು ದಿನದಿಂದ ದಿನಕ್ಕೆ ಮಗ ಸೊಸೆಯನ್ನು ನೆನೆಯುತ್ತಾ ನೊಂದು ಹೋಗಿದ್ದರು. ಚಿತ್ರಾ ತನ್ನ ಮಗನೊಂದಿಗೆ ಮತ್ತೆ ಹಳ್ಳಿಯಲ್ಲಿರುವ ಅತ್ತೆ ಮನೆಗೆ ಬಂದು ಅತ್ತೆ ಮಾವನ ಹತ್ತಿರ ಕ್ಷಮೆಯಾಚಿಸಿ ಒಳ್ಳೆ ಬದುಕ ನಡೆಸಲು ನಿರ್ಧರಿಸಿದಳು. ಇತ್ತ ಅರ್ಚನಾ ಅನಂತಯ್ಯನವರು ಸೊಸೆ ಮತ್ತು ಮೊಮ್ಮಗ ಬಂದ ಖುಷಿಯಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡರು. ನಂತರ ರವಿ ಕೂಡಾ ಊರಲ್ಲಿಯೇ ಬಂದು ಎಲ್ಲರೂ ಒಂದಾಗಿ ಒಗ್ಗಟ್ಟಿನ ಜೀವನ ನಡೆಸಿದರು.


2 thoughts on ““ಉರುಳಿದ ಕಾಲಚಕ್ರ” ಸಣ್ಣ ಕಥೆ-ಅಶ್ವಿನಿ ಕುಲಾಲ್ ಕಡ್ತಲ

Leave a Reply

Back To Top