ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಹನಿಗಳ ಪಲ್ಲವಿ……
ಎಲೆ ಎಲೆಯ ಎಳೆಯ ಮೇಲೆ
ಹೊಸ ಸಾಲಿನ ಮುನ್ನುಡಿ
ಹನಿ ಹನಿಯ ಒಲವ ದಾಟಿ
ಇಳೆಗೆ ಹನಿಗಳ ಪಲ್ಲವಿ
ಸಗ್ಗ ನೋಟ ಚೆಂದ ಭಾವ
ಕುಳಿತು ನೋಡಲು
ವರ್ಷ ಧಾರೆ ಧಾರೆಯಾಗಿ
ಕುಣಿದು ಹೋಗಲು
ಹಸಿರು ರಾಶಿ ಚಿಗುರು ಸೂಸಿ
ನಗುತಾ ನಿಲ್ಲಲು
ನೋಡಿದಷ್ಟು ಚೆಲುವು ಅಂದ
ಕಣ್ಣು ತುಂಬಲು
ನೀರಿನೊಳಗೆ ಅಡಗಿ ಕುಳಿತ
ಜೀವ ಜೀವಿತ
ಮಣ್ಣಿನೊಳಗೆ ಅಂಟಿಕೊಂಡ
ಬದುಕು ಪರಿಚಿತ
ಬಂಧದೊಳಗೆ ಸಂಬಂಧ
ಹರಿವ ನೀರಿನಾಸರೆ
ಖುಷಿಯೊಳಗೆ ಅನುಬಂಧ
ಬದುಕ ಒಲವಿನಾಸರೆ
ನಾಗರಾಜ ಬಿ.ನಾಯ್ಕ.
Super sir
ಧನ್ಯವಾದಗಳು
ಸೂಪರ್ ಸರ್
ಧನ್ಯವಾದಗಳು
ಸರಳ ಚಂದ ಕವಿತೆ..
@ ಫಾಲ್ಗುಣ ಗೌಡ ಅಚವೆ
ಧನ್ಯವಾದಗಳು ತಮ್ಮ ಓದಿಗೆ.
ಸೊಗಸಾದ ಸಾಲುಗಳು.
ಧನ್ಯವಾದಗಳು ತಮ್ಮ ಓದಿಗೆ