ಸವಿತಾ ದೇಶಮುಖ ಅವರ ಕವಿತೆ-ಪ್ರೇಮಾನುಬಂಧದಿ.

ಒಲುಮೆ ಭಾವನೆಗಳ
ನಲುಮೆಯ ಕಸಾರ ಕವಲೊಡೆದು,
ಸ್ವಾರ್ಥ- ನಿರ್ಬಂಧಗಳ
ಎಲ್ಲೆಯ ದಾಟಿ
ಒಂದಾಗಿ ಬೆಸೆಯುವ
ಬಂಧನ -ಪ್ರೇಮ…

ಪ್ರೆಮಮಯ ಶಬ್ದವು
ಕರಣ ಪಟಲಕ್ಕೆ ತಾಕಿ,
ಹೃದಯದಾಳದಲ್ಲಿ ಇಳಿ ಇಳಿದು
ಮಧುರ ಮಂಟಪವ ಕಟ್ಟಿಪ
ಬ್ರಹ್ಮಾಂಡ-ಸತ್ಯದ ಮೂಲ…

ಪ್ರೇಮಾಂಜಲದಲಿ
ಜನನ -ಜೀವನ,
ಅಳಿಯಲಾಗದ ಆಳ ಉದ್ದಗಲ ವಿಸ್ತೀರ್ಣ….
ಪ್ರೇಮದ- ಹರಣ

ಪ್ರೀತಿಯ ಉಗಮವು
ಅಸ್ಖಲಿತ- ಆಗಮ್ಯ,
ನಿತ್ಯ- ನಿರಂತರ
ಹರಿಯುವ ಧಾರೆ
ನಿರ್ಮಲ-ಪರಿಪುರ್ಣ.

ಸ್ಖಲಿತದಲ್ಲಿ ಎನಿತು ಜೀವಿಗಳು
ಸುತ್ತಿ ಸುಳಿದಾಡುವರು
ಹಾಗೆ -ಹೀಗೆ -ಹೇಗೋ..
ಲಂಗು ಲವಾಮವಿಲ್ಲದ
ಕುದುರೆ-ಓಟ
ಪಯಣದ ಸತ್ಯದ- ತಿರುಳರಿಯದೆ …
ತೊಳಲಾಡುವ -ಕಾಟ
.
ಪ್ರೇಮದ ಅಸ್ಖಲಿತದಲ್ಲಿ
ಕಟ್ಟುವ ಗರ್ಭ ನಿಸರ್ಗದ ವೈಭವದ ಹದನವು…
ಇಹದೊಳಗಾಡುವ ಅಸಂಖ್ಯಾತ
ಪ್ರಾಣಿಗಳ ನಲಿವವು..
ಸಲಿಲಶ್ರುತಿಯ ಪ್ರವಾಹದಲ್ಲಿ….


Leave a Reply

Back To Top