ಮನ್ಸೂರ್ ಮೂಲ್ಕಿಕವಿತೆ-ನಾ ನಿನ್ನಲಿ

ನಾ ನಿನ್ನಲಿ ಈ ಪ್ರೀತಿಲಿ
ಬಾನು ಭೂಮಿ ಅಂತರ
ಅದ್ಯಾಕಲೆ ನಾ ಕಾಣೆನು
ಬಾನ ಸೊಗಸ ಚಂದಿರ

ತುಂತುರು ಮಳೆಗೆ ನಿನ್ನ ಕನಸು
ಮೂಡಿಬರಲು ನನಗೆ ಸೊಗಸು
ನಿಲ್ದಾಣವೇ ಬೇಡೆಂದಿದೆ ನಿನ್ನ ಪ್ರೀತಿಯು
ಕೊನೆಯವರೆಗೂ ನೀನೇ ಸಾರಥಿಯು

ಕಂಡ ಕನಸು ನನಸಾಗೋ ಹೊತ್ತು
ನಿನ್ನ ಮಡಿಲು ನನ್ನ ತೊಟ್ಟಿಲು
ಮಾತೇ ಇಲ್ಲ ಮೌನ ಎಲ್ಲ
ನನ್ನ ನೋಟ ನಿನ್ನ ಗಲ್ಲ

ಬರಿದಾಗದು ನಮ್ಮ ಪ್ರೀತಿಯು
ಕಡಲ ತಡಿಯ ಅಲೆಯಲಿ
ಆಮಂತ್ರಣವ ನಾ ಕೊಡದೇನೇ
ಬಂದಿಯಾಗೇನು ನಾ ನಿನ್ನಲಿ


Leave a Reply

Back To Top