“ಸ್ವಸ್ಥ ಮನಸ್ಸು ಸುಸ್ಥಿರ ಆರೋಗ್ಯ” ಜಯಲಕ್ಷ್ಮಿ ಕೆ. ಅವರ ಲೇಖನ

ಮನುಷ್ಯ ಯಾವಾಗ ಅಲೆಮಾರಿ ಜೀವನವನ್ನು ಬಿಟ್ಟು ಒಂದೆಡೆ ನೆಲೆ ನಿಂತು ಬದುಕು ಕಟ್ಟಿಕೊಳ್ಳಲಾರಂಭಿಸಿದನೋ ಅಂದಿನಿಂದ ಅವನಲ್ಲಿ ಭಾವನಾತ್ಮಕ  ಸಂಬಂಧಗಳು ಬೆಳೆಯಲಾರಂಭಿಸಿದವು. ಅಜ್ಜ – ಅಜ್ಜಿ, ಅಪ್ಪ -ಅಮ್ಮ, ಚಿಕ್ಕಪ್ಪ – ದೊಡ್ಡಪ್ಪ, ಹೀಗೆ ಎಲ್ಲರೊಂದಿಗೆ ಮಕ್ಕಳು ಬೆರೆತು ವಿಶಾಲ ಮನೋಭಾವದೊಂದಿಗೆ ಬೆಳೆಯುತ್ತಿದ್ದರು. ಆದರೆ ಯಾವಾಗ ಶಿಕ್ಷಣ, ಉದ್ಯೋಗ, ಸ್ವತಂತ್ರ ಬದುಕು ಎಂದು ಮೂಲ ಬೇರಿನಿಂದ ಬೇರ್ಪಟ್ಟು ದೂರ ಸರಿಯಲಾರಂಭಿಸಿದರೋ ಅಂದಿನಿಂದ ಸ್ವಾರ್ಥ ಮನೋಭಾವವೂ ಬೆಳೆಯುತ್ತಾ ತಾನು, ತನ್ನದು, ಎನ್ನುವ ತುಡಿತ ಜಾಸ್ತಿ ಆದಂತೆ ಮಾನಸಿಕ ನೆಮ್ಮದಿ ಹಾಳಾಗುತ್ತಾ ಹೋಯಿತು. ತನ್ನ ಸುಖಕ್ಕಾಗಿ ಹಾಕಿಕೊಂಡ ವರ್ತುಲದೊಳಗೆ ಬಂಧಿಯಾದ ಮನುಷ್ಯ ತನ್ನ ಬದುಕಿನ ಓಟದಲ್ಲಿ ನಗು – ನೆಮ್ಮದಿ ಕಳೆದುಕೊಂಡು ಸದಾ ಒತ್ತಡದಿಂದ ಬದುಕುವ ಸ್ಥಿತಿಗೆ ಬರುವಂತಾಯಿತು.

ಬದಲಾವಣೆ ಜಗದ ನಿಯಮ. ಆದರೆ ಯಾವ ದಿಕ್ಕಿನಲ್ಲಿ? ಮೌಲ್ಯಗಳನ್ನು ಬದಿಗಿಟ್ಟು, ಜೀವನದ ಗುಣಮಟ್ಟವನ್ನು ಬಲಿಕೊಟ್ಟು ಮಾನಸಿಕ ಒತ್ತಡದಲ್ಲಿಯೇ ಬದುಕುವುದು ಆರೋಗ್ಯಕರ ಬದಲಾವಣೆ ಅಲ್ಲ. ಮಾನಸಿಕ ಆರೋಗ್ಯ ಸರಿ ಇದ್ದಾಗ ಮಾತ್ರ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ.ಹಾಗಾದರೆ  ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?

ಸದಾ ಸಕಾರಾತ್ಮಕವಾಗಿ ಆಲೋಚಿಸುವುದು, ಜೀವನದ ಏಳು – ಬೀಳುಗಳನ್ನು ಸಮ ಚಿತ್ತದಿಂದ ಸ್ವೀಕರಿಸುವುದು, ವೃತ್ತಿಯಲ್ಲಿ ತೃಪ್ತಿ  ಪಡುವುದು, ಮನೋರಂಜನಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಇತ್ಯಾದಿಗಳಿಂದ ಮನದ ಪ್ರಶಾಂತತೆಯನ್ನು ಕಾಯ್ದುಕೊಳ್ಳಲು ಸಾಧ್ಯ.

” ಅತಿಯಾದ ಆಸೆಯು ಸ್ವಾರ್ಥ ಸಾಧನೆಗೆ ಮನಸ್ಸನ್ನು ಪ್ರಚೋದಿಸಿದರೆ, ಅಪನಂಬಿಕೆ ಅಪರಾಧಗಳಿಗೆ ದಾರಿ ಮಾಡಿಕೊಡುತ್ತದೆ ” ಎಂದಿದ್ದಾನೆ ಬುದ್ಧ. ” ಮನಸ್ಸಿನ ಚಲನವಲನ ಸರಿಯಾಗಿದ್ದರೆ ಅದುವೇ ಆರೋಗ್ಯ ” ಎನ್ನುತ್ತಾನೆ ಖ್ಯಾತ ದಾರ್ಶನಿಕ ರೋಸ್ಸೋ. ಅಸಂಖ್ಯ ಆಲೋಚನೆಗಳು, ಕಲ್ಪನೆಗಳು, ಸಂವೇದನೆಗಳು ಎಲ್ಲಕ್ಕೂ ಮೂಲ ಮನಸ್ಸು. ಅಲ್ಲಿ ಮೂಡುವ ಅಂಶಗಳೇ ದೇಹದ ಆರೋಗ್ಯವನ್ನು ನಿರ್ಧರಿಸತಕ್ಕಂತಹ ಅಂಶಗಳು. ಎಂಥ ವಿಷಮ ಪರಿಸ್ಥಿತಿಯಲ್ಲಿಯೂ ವಿಚಲಿತಗೊಳ್ಳದ ಮನೋಬಲ ಬುದ್ಧನಿಗಿತ್ತು. ಎಂಥ ಪ್ರಶ್ನೆಗಳೇ ಎದುರಾದರೂ ಬುದ್ಧಿಯ ಬಲದಿಂದ   ಶಾಂತವಾಗಿ ಉತ್ತರಿಸುವ  ಮನಸ್ಥಿತಿ ಸ್ವಾಮಿ ವಿವೇಕಾನಂದರಿಗಿತ್ತು. ಭಾವನೆಗಳನ್ನು ಹತೋಟಿಯಲ್ಲಿಡುವ, ಒತ್ತಡಗಳನ್ನು ನಿಭಾಯಿಸಿಕೊಂಡು ಹೋಗುವ ಬಲ ನಮ್ಮ ಮನಸ್ಸಿಗಿದ್ದರೆ ನಮ್ಮ ದೇಹದ ಆರೋಗ್ಯ ಸುಸ್ಥಿರವಾಗಿರುತ್ತದೆ.

ಮನಸಿಗೆ ಶ್ರಮ ಕೊಡುವ ಬದಲಾಗಿ ದೇಹಕ್ಕೆ ಶ್ರಮ ನೀಡಿದರೆ ಆರೋಗ್ಯದ ಮಟ್ಟವನ್ನು ಕಾಯ್ದುಕೊಳ್ಳಬಹುದು. ” ಕೆಲಸ ಇಲ್ಲದವನನ್ನು ರೋಗಗಳು ಹುಡುಕಿಕೊಂಡು ಬರುತ್ತವೆ ” ಎನ್ನುವ ಪ್ರಚಲಿತ ಮಾತನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಚಿಂತೆ ಮಾನಸಿಕ ಆರೋಗ್ಯವನ್ನು ಹಾಳು ಮಾಡುವ ಜೊತೆಗೆ ಕಾಯಿಲೆಗಳಿಗೆ ಪರೋಕ್ಷವಾಗಿ ಆಹ್ವಾನ ನೀಡುತ್ತದೆ. ಚಿಂತೆ ಇಲ್ಲದ ಮನಸುಗಳೇ ಇಲ್ಲ. ” ಚಿಂತೆಯೆಂಬ ಪಕ್ಷಿಗಳು ನಮ್ಮ ತಲೆಯ ಮೇಲೆ ಹಾರಾಡುವುದನ್ನು ತಪ್ಪಿಸಲು ಆಗದೇ ಇರಬಹುದು, ಆದರೆ ಅವು ತಲೆಯಲ್ಲಿ ಗೂಡು ಕಟ್ಟಿಕೊಳ್ಳದಂತೆ ನೋಡಿಕೊಳ್ಳಬಹುದು.

ಆರ್ಥಿಕವಾಗಿಯೋ, ಸಾಮಾಜಿಕವಾಗಿಯೋ, ನಾವು ಇರುವ ಸ್ಥಿತಿಯಿಂದ ಸುಧಾರಣೆಗೊಳ್ಳಬೇಕೆಂಬ ಆಕಾಂಕ್ಷೆ ಇರಲಿ.. ಅದು ಒಳ್ಳೆಯದೇ. ಆದರೆ ಮಹತ್ವಾಕಾಂಕ್ಷೆಯಲ್ಲಿಯೇ ಮುಳುಗುವವನಿಗೆ ತೃಪ್ತಿ ಕನಸಿನ ಗಂಟು ಎನ್ನುತ್ತಾರೆ ವಿ. ಕೃ. ಗೋಕಾಕ್ ರವರು. ಇಂತಹ ಮಹತ್ವಾಕಾಂಕ್ಷೆಯನ್ನು ಕುರಿತು ” ಮುದುಕನ ಹೆಗಲೇರಿ ಕುಣಿಯುವ ತರುಣ ” ಎಂಬುದಾಗಿ ದ ರಾ ಬೇಂದ್ರೆಯವರು ‘ ಹಸಿ ಹಂಬಲ ‘ ದಲ್ಲಿ ಹೇಳಿದ್ದಾರೆ.

” ಬೇಕು… ಬೇಕು ಎನ್ನುವ ಹಂಬಲ ಅಥವಾ ಅತಿ ಆಸೆ ಮಾನಸಿಕ ಆರೋಗ್ಯದ ಮೊದಲ ವೈರಿ. ಆಸೆಯ ಬೆನ್ನು ಹತ್ತಿಯೇ ಬದುಕುವವನು ನಿರಾಸೆಯೊಂದಿಗೇ ಸಾಯಬೇಕಾದೀತು “ಎನ್ನುವ ಮಾತೊಂದಿದೆ. ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಡು : ಹರುಷಕ್ಕಿದೆ ದಾರಿ ಎಂದು ಡಿ ವಿ ಜಿ ಯವರು ಹೇಳಿದ್ದು ಕೂಡಾ ಈ ಅರ್ಥವನ್ನೇ ಕೊಡುವಂಥದ್ದು. ತನ್ನಲ್ಲಿರುವುದನ್ನು ಮರೆತು ಸೃಷ್ಟಿಯಲ್ಲಿರುವ ಸಕಲ ಸವಲತ್ತುಗಳನ್ನು ಬಯಸುವ ಲೋಭಿ ಎಂದಿಗೂ ಸಂತೋಷದಿಂದ  ಬಾಳಲಾರ. ಕೊರತೆಗಳನ್ನೇ ಹುಡುಕುವವನಿಗೆ ಕೊರಗು ತಪ್ಪದು.

ಅತಿ ಆಸೆ, ಅತೃಪ್ತಿ, ಹತಾಶೆ, ನಿರಾಶಾಭಾವ, ಹಗೆ ಸಾಧಿಸುವ ಗುಣ ಇತ್ಯಾದಿಗಳು ಮನಸಿನ ಪ್ರಸನ್ನತೆಯನ್ನು ಹಾಳುಗೆಡಹುವ ಅಂಶಗಳು. ಇಂತಹ ಋಣಾತ್ಮಕ ಅಂಶಗಳಿಗೆ ಮನಸಿನಲ್ಲಿ ಎಡೆ ಕೊಟ್ಟಷ್ಟು ದೇಹ ಅನಾರೋಗ್ಯದ ಗೂಡಾಗುತ್ತದೆ. ಎಲ್ಲರನ್ನೂ ಎಲ್ಲವನ್ನೂ ಅಸಹನೆಯಿಂದಲೇ ನೋಡುವ ಮನಸು ಬಹು ಬೇಗ ಖಿನ್ನತೆಯತ್ತ ಜಾರುತ್ತದೆ. ಇದು ದೀರ್ಘ ಕಾಲ ಕಾಡಬಲ್ಲ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ.

ಸೋಲು, ನಷ್ಟ-ಕಷ್ಟಗಳು ಸಕಲ ಮನುಕುಲವನ್ನು ಕಾಡುವ ಸಾಮಾನ್ಯ ಅಂಶಗಳು. ಕೇವಲ ನಮಗಷ್ಟೇ ಸೀಮಿತ ಅಲ್ಲ ಎಂದು ಅರಿತವನು ಮನಸಿನ ಸಮತೋಲನ ವನ್ನು ಕಳೆದುಕೊಳ್ಳುವುದಿಲ್ಲ.
ಸ್ವಸ್ಥ ಮನಸ್ಸು ಸುಸ್ಥಿರ ಆರೋಗ್ಯ

ದೇಹ ಮತ್ತು ಮನಸ್ಸು ಆಪ್ತ ಸ್ನೇಹಿತರೇ ಆದರೂ ಮನಸಿನ ಪಾತ್ರ ಎಂದಿಗೂ ಹಿರಿದು. ಕಾಲಿಗೆ ಒಂದು ಮುಳ್ಳು ಕಚ್ಚಿದರೆ ತಕ್ಷಣ ಮೆದುಳು  ಕೈಗೆ ಆಜ್ಞೆ ಮಾಡಿ ಕೈ ಕೂಡಲೇ ಆ ಮುಳ್ಳನ್ನು ಕಿತ್ತು ಎಸೆಯುತ್ತದೆ. ಮನಸು ಸ್ಥಿಮಿತದಲ್ಲಿ ಇದ್ದಾಗ ಮಾತ್ರ ಇಂತಹ ಧಿಡೀರ್ ಪ್ರಕ್ರಿಯೆಗಳು ಸಾಧ್ಯ. ಅಂದರೆ ಮನಸು ನಮ್ಮ ಇಡೀ ದೇಹವನ್ನು ನಿಯಂತ್ರಿಸುತ್ತದೆ. ಮನಸು ಸೋತರೆ ದೇಹ ಸೋತಂತೆ. ಆದ್ದರಿಂದ ನಮ್ಮ ಮನಸ್ಸನ್ನು ಸದಾ ಗೆಲುವಾಗಿರಿಸಿಕೊಳ್ಳೋಣ.

ವಿವಿಚ್ಯ ಗ್ರಹಣಮ್ ವಿವೇಕಮ್… ನಮ್ಮ ಮನಸಿನ ಒಳಿತಿಗೆ ಯಾವುದು ಹಿತ, ಯಾವುದು ಅಹಿತ ಎನ್ನುವುದನ್ನು ಗ್ರಹಿಸುವ ಶಕ್ತಿ ಎಂದರೆ ಅದು ವಿವೇಕ. ಅದು ನಮ್ಮ ಒಳಗಣ್ಣು. ಆ ಕಣ್ಣು ಜಾಗೃತವಾಗಿದ್ದರೆ ದೇಹದವೂ ಆರೋಗ್ಯವಾಗಿರುತ್ತದೆ.

———————————

Leave a Reply

Back To Top