ಕಾವ್ಯ ಸಂಗಾತಿ..
ಆರ್ಕೆ
“ನಿನಗಾಗಿ ಕಾಯುವ ಕಾವ್ಯ”
ಕವಿತೆಗಳ ಬಿಗುಮಾನಕ್ಕೆ
ಸಿಕ್ಕಿದವಳು.
ಒಮ್ಮೆ ತಿರುಗಿ ನೋಡಿ
ನಾಚಿದಳು.
ಸಿಗದವಳ ನೆನಪಲ್ಲೇ
ಇಂದು ಕವಿಯಾಗಿರುವೆ.
ಕವಿತೆ ಗೀಚಿರುವೆ.
ದೂರದಲ್ಲಿ ಅಲ್ಲೆಲ್ಲೋ
ಅರಳಿ ನಿಂತವಳ
ನೋಡಿ ಘಮಿಸಿ
ಮತ್ತೆ ಬರೆಯುವೆ…
ನಿನಗಾಗಿಯೇ
ಕಾಯುವ ಕಾವ್ಯ
ನನ್ನೊಳಗೆ
ಸದಾ ಉರಿಯುವ
ರುದ್ರಾಗ್ನಿ..
ಆರ್ಕೆ.