ಶೃತಿ ರುದ್ರಾಗ್ನಿಯವರ ಹೊಸ ಕವಿತೆ-ಕವಿ ನಾವಿಕ.

ಮನಸಲ್ಲಿ
ಮುಕ್ತವಾಗಿ
ವಿಚಾರಧಾರೆಗಳ
ವಿಚಲಿತವಾಗದೆ
ಚರ್ಚಿಸಿದ
ಮುಕ್ತಕ…

ನಿನ್ನದೆ
ಛಲವನ್ನು
ಛಂದಸ್ಸಿಗೆ
ಇಳಿಸುವ
ಚೆಲುವಿಗೆ
ಪ್ರೀತಿ ಪ್ರೇಮ ಕಾಮ
ಯಾವದಕ್ಕೂ
ಹೋಲಿಸಲಾರದ
ಕೌತುಕ…

ನನ್ನೊಳಗೆ
ನೀನು
ನೀನಾಗಿ
ಇದ್ದು ಬಿಡುವ
ಇಗರ್ಜಿ ಮಸೀದಿ
ಗುಡಿ ಗೋಪುರಗಳ
ಒಂದಷ್ಟು
ಐತಿಹಾಸಿಕ
ಸೃಷ್ಟಿಗೆ
ಭಕ್ತಿ ಪೂರ್ವಕ…

ಧರ್ಮದ
ಭಾವೈಕ್ಯತೆ
ಸಮಾನತೆ
ಸಾರ್ಥಕತೆ
ಎಲ್ಲವನ್ನು
ಈರ್ಷೆಗೆ ಇಟ್ಟು
ಇರುವಷ್ಟು ದಿನವೂ
ನನ್ನೊಳಗೆ
ನಾ ಸುಡುವಂತೆ
ಮಾಡಿದ
ಜ್ಞಾನ ಮಾಲೀಕ…



“ಭಗವಂತ…. ದೈವೀಕ …” ??


ಶ್…!! ಮೌನ……….!!

ತಿಳಿಯದಷ್ಟು
ಮರ್ಮವ
ಹುಟ್ಟು ಹಾಕುತ್ತಾ  
ಹುಟ್ಟಿಲ್ಲದ
ದೋಣಿಯನ್ನು
ನಿನ್ನ ಗಹನ
ನೋಟದಲ್ಲೇ
ನನ್ನ ನಡೆಸಿದ
“ಕವಿ” ನಾವಿಕ…

—————————-

Leave a Reply

Back To Top