ಪ್ರಮೋದ ಜೋಶಿಯವರ ಕವಿತೆ-ಧನ್ಯವೀ ಚೇತನಾ

ತಂಗಲು ಬಂದವರು
ಅಂಗಳ ನಮದಲ್ಲಾ
ತಿಂಗಳುಗಳೇ ಕಳೆದರೂ
ತೊರೆಯಬೇಕು ಒಂದುದಿನ

ಉಣಲುಂಟು ತೊಡಲುಂಟು
ಸಂತೋಷಕೆ ಕ್ಷಣವುಂಟು
ಮಾಡಿಕೊಳ್ಳದೆ ಮುಖದಗಂಟು
ನಗುತ ಉಳಿಸು ಸ್ನೇಹನಂಟು

ಮೂರುದಿನದ ಯಾತ್ರೆ
ಅದರೊಳಗೆ ಮಾಡು ಜಾತ್ರೆ
ಇಲ್ಲಸಲ್ಲದ ರಗಳೆಯಿಂದ
ಪಡೆಯದಿರು ತಾಪತ್ರೆ

ಇಂದು ನಮ್ಮ ಸರದಿ
ನಾಳೆ ಮತ್ಯಾರದೊ
ವಿಧಿ ಹಾಕಿದ ನಿಯಮಕೆ
ತೆಪ್ಪಗೆ ಇದ್ದುಬುಡು

ತಿಂಗಳುಗಳು ಕಳೆದರೇನು
ಅಂಗಳ ಬಿಡಲೇಬೇಕು
ಇನ್ನೊಬ್ಬರಿಗೆ ಬಿಟ್ಟು ಕೊಟ್ಟು
ನಮ್ಮತನ ಉಳಿಸಬೇಕು

ಉದಿರಿದರೂ ಹಣ್ಣೆಲೆ
ಇತ್ತು ಮರಕೆ ಆಸರೆ
ಉದಿರಿತೆಂದು ಅಳುವದಿಲ್ಲಾ
ಚಿಗಿಯುವದ ಮತ್ತೆ ಬಿಡುವದಿಲ್ಲಾ

ಇಷ್ಟೇ ಇದೆ ಜೀವನಾ
ನಮ್ಮಲ್ಲೇ ಇದೆ ಸಾಧನಾ
ಬಳಸಿ ನಡೆಸು ಬದುಕನ್ನಾ
ಧನ್ಯ ನಿನ್ನ ಚೇತನಾ

ಧನ್ಯವೀ ಜೀವನಾ

5 thoughts on “ಪ್ರಮೋದ ಜೋಶಿಯವರ ಕವಿತೆ-ಧನ್ಯವೀ ಚೇತನಾ

  1. ನಾಲ್ಕು ದಿನದ ಈ ಬದುಕನ್ನು ಹೇಗೆ ಬದುಕಬೇಕೆಂಬುದನ್ನು ಸುಂದರವಾಗಿ ಬರೆದಿದ್ದೀರ.

    ಎಚ್.ಮಂಜುಳಾ.

  2. ತುಂಬಾ ಚೆನ್ನಾಗಿ ಬರೆದಿದ್ದೀರಿ ಸರ್ ಬಹಳ ಖುಷಿಯಾಯ್ತು “ಬದುಕಲು ಬದುಕು” ಎಂಬುದನ್ನ ತಿಳಿಸಿ ಕೊಟ್ಟಿದ್ದೀರಿ ಇಂತಹ ಇನ್ನಷ್ಟು ಕವನಗಳು ನಿಮ್ಮಂತರಾಳದಿಂದ ಹೊರಬರಲಿ.

Leave a Reply

Back To Top