ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ನಿನ್ನೆಡೆಗೆ ನನಗೆ ಅತಿ ಆಸಕ್ತಿ ಏಕೆ ಹುಟ್ಟಿತೋ ನಾನರಿಯೆ
ನಿನ್ನ ಹೆಸರ ಸುಗಂಧ ನನ್ನನು ಆವರಿಸಿತೋ ನಾನರಿಯೆ
ಮದುವೆಗಳು ಸ್ವರ್ಗದಲೇ ನಿರ್ಣಯ ವಾದುದೆಂಬರು
ನಮ್ಮ ಜೋಡಿ ಏಕೆ ಇಂದ್ರನ ಕೈ ಜಾರಿತೋ ನಾನರಿಯೆ
ಯಾರು ಯಾರನು ನಮ್ಮಲ್ಲಿ ಮೊದಲು ಕಂಡೆವೋ ತಿಳಿಯೆ
ಪ್ರೇಮಾಂಕುರ ಪ್ರಥಮವಾಗಿ ನಮ್ಮಲಿ ಯಾರಿಗಾಯ್ತೋ ನಾನರಿಯೆ
ನಿನ್ನೊಡನೆ ಸಂಭಾಷಣೆ ಸಿಹಿ ಜೇನು ಸವೆದಂತೆ ಇರುತಲಿತ್ತು
ಅದುವೇ ಮನ್ಮಥ ಬಿಟ್ಟ ಬಾಣವಾಯ್ತೋ ನಾನರಿಯೇ
ಕೃಷ್ಣಾ! ಅಂದವ ನೋಡಿ ಆನಂದಿಸುವುದು ತಪ್ಪಲ್ಲಾ
ನನ್ನದಾಗ ಬೇಕೆಂಬ ಭಾವ ಏಕೆ ಮೂಡಿತೋ ನಾನರಿಯೆ
————————
ಬಾಗೇಪಲ್ಲಿ