ಕಾವ್ಯ ಸಂಗಾತಿ
ಲೋಹಿತೇಶ್ವರಿ ಎಸ್ ಪಿ
ಈ ಗುರುತು ನನ್ನದೇ….
ಈ ಗುರುತು ನನ್ನದೇ
ನಾನೇ ದಕ್ಕಿಸಿಕೊಂಡದ್ದು
ಬಂಧವೆಂಬ ಬಂಧನದಿ
ನೂರಾರು ಕಟ್ಟಳೆ ದಾಟಿ ಪಡೆದದ್ದು
ಗುರುತೇ ಇಲ್ಲದೆ ದುಡಿದು
ಎಲ್ಲವನ್ನೂ ಧಾರೆಯೆರೆದು
ಮೂಲೆ ಗುಂಪಾಗಿದ್ದು ಸಾಕಾಗಿ
ಈಗಲೇ ದಕ್ಕಿಸಿಕೊಂಡದ್ದು
ಈ ಗುರುತು ನನ್ನದೇ
ನಾನೇ ದಕ್ಕಿಸಿಕೊಂಡದ್ದು
ನಿನ್ನೆ ಮೊನ್ನೆಯದಲ್ಲ ಈ ಹೋರಾಟ
ಸಾವಿರಾರು ವರುಷಗಳೇ ಉರುಳಿ
ಮನದಿ ಮೂಡಿದ ಆಸೆಗಳ
ಸಮಾಧಿ ಮಾಡಿ
ಹೊಸ ಕನಸು ಕಂಡು ಹೊಸ ಲೋಕದಿ
ಇಂದೇ ದಕ್ಕಿಸಿಕೊಂಡದ್ದು
ಈ ಗುರುತು ನನ್ನದೇ
ನಾನೇ ದಕ್ಕಿಸಿಕೊಂಡದ್ದು
ಹೆಣ್ಣೆಂಬ ಭಾವದಿ ಹಿಂಜರಿದು
ಹೇಡಿಯಂತೆ ಬದುಕಿ
ನನ್ನ ಶಕುತಿಯ ಅರಿತು
ನನ್ನ ಮನದಲಿನ ಭಾವನೆಗಳಿಗೆ
ಜೀವನೀಡಿ ಹೊಸ ರೂಪ ಕೊಟ್ಟು
ಈಗಷ್ಟೇ ಕಂಡು ಕೊಂಡದ್ದು.
ಈಗಿನ ಈ ಗುರುತು ನನ್ನದೇ
ನಾನೇ ಪಡೆದದ್ದು…
ಯಾರೋ ನೀಡಿದ್ದಲ್ಲ…..
————————————————–
ಲೋಹಿತೇಶ್ವರಿ ಎಸ್ ಪಿ.
ಗುರುತು ಹುಡುಕುವ ಪ್ರಯತ್ನ… ತನ್ನನ್ನು ತಾನು ಗುರುತಿಸಿಕೊಂಡು ಮುಖ್ಯವಾಹಿನಿಯಲ್ಲಿ ನಿಲ್ಲಬೇಕೆಂಬ ಹಂಬಲ ಈಗಿನದಲ್ಲಾ… ಅದು ಅನೂಚಾನವಾಗಿ ನಡೆದುಕೊಂಡು ಬಂದದ್ದೇ… ಅಂತ ಪ್ರಯತ್ನ ಮಾಡುವ ಗಟ್ಟಿ ಮನಸ್ಸು ಹಾಗೂ ಅದನ್ನು ದಕ್ಕಿಸಿಕೊಂಡ ಪ್ರಯತ್ನಶೀಲ ಹೆಂಗರಳುಗಳು ಅತಿ ವಿರಳ….. ನಾಲ್ಕು ಗೋಡೆಯ ನಡುವೆ ಒಲೆಯನೂದಿದ್ದು ಸಾಕು ಎಂಬ ತಹತಹಿಕೆಯಿಂದ ಸಿಡಿದೆದ್ದು ಬರುವ ನಿಮ್ಮಂತ ಹೊಸ ಕನಸಿನ ಹೃದಯಿಗಳು ನೂರು… ಸಾವಿರವಾಗಲಿ…. ಶುಭಾಶಯಗಳು…
Superb