ಮಹಿಳಾ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಇಂದಿನ ಸ್ತ್ರೀ
ಭುವಿಯ ಹುಟ್ಟಿನೊಂದಿಗೆ ಮನುಕುಲದ ಉಗಮದೊಂದಿಗೆ ಸ್ತ್ರೀ ಕೂಡ ಬೆಳೆದಳು .ಕಾಡಿನಲ್ಲಿ ವಾಸ ಮಾಡಿದ ಮಾನವ ಒಂದೆಡೆ ಬದುಕಲು ಕಲಿತಾಗ ತನ್ನ ರಕ್ಷಣೆಗಾಗಿ ಗುಡಿಸಲು ಮನೆಗಳನ್ನು ಕಟ್ಟಿಕೊಳ್ಳತೊಡಗಿದ. ಒಂದೆಡೆ ಜೀವಿಸಲು ಪ್ರಾರಂಭಿಸಿದ. ಸಂತಾನೋತ್ಪತ್ತಿ ಕ್ರಿಯೆ ಜೀವಿಯ ಒಂದು ಮುಖ್ಯ ಕ್ರಿಯೆಯಾಗಿ, ತನ್ನನೆ ಹೋಲುವ ಜೀವಿಗೆ ಜನ್ಮ ಕೊಡುವ ಪ್ರಾಣಿಗಳಲ್ಲಿ ಶ್ರೇಷ್ಠ ಪ್ರಾಣಿ ,ಬುದ್ಧಿವಂತ ಪ್ರಾಣಿ ಎಂದು ಗುರುತಿಸಿಕೊಂಡ ಮನುಷ್ಯ .ಹೀಗೆ ಪುರುಷ ತನ್ನ ಹೆಂಡತಿಯನ್ನು ಮತ್ತು ಮಕ್ಕಳನ್ನು ರಕ್ಷಿಸಲೆಂದೇ ಮನೆಗಳನ್ನು ಕಟ್ಟಿದ. ಒಂದೆಡೆ ಬದುಕಲು ಪ್ರಾರಂಭಿಸಿದ ಅಂದಿನಿಂದ ಹೆಣ್ಣು ಮನೆಯ ನಿರ್ವಾಹಕಿಯಾಗಿ, ಮಕ್ಕಳ ಪಾಲನೆ- ಪೋಷಣೆ ಮಾಡುವುದಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟು, ಗಂಡು ತಂದುಕೊಟ್ಟ ಆಹಾರ ಪದಾರ್ಥಗಳ ಬೇಯಿಸಿ ಎಲ್ಲರಿಗೂ ಉಣಬಡಿಸುವುದು, ಎಲ್ಲರ ಯೋಗಕ್ಷೇಮ ನೋಡಿಕೊಳ್ಳುವುದು ಇವಳ ಕರ್ತವ್ಯವಾಗಿ ಪ್ರಾರಂಭವಾದ ನಾಗರಿಕ ಜೀವನದ ಪ್ರಾರಂಭದಿಂದ ಮಹಿಳೆಯ ಶೋಷಣೆ ಆರಂರಂಭವಾಯಿತು ಎಂದು ಅನಿಸುತ್ತದೆ.
ಸಮಾಜ ಬೆಳೆದಂತೆಲ್ಲ ಮನೆ ಗುಡಿಸಲುಗಳಿಂದ, ಊರುಕೇರಿ, ನಗರ ಹೀಗೆ ದೊಡ್ಡ ,ಚಿಕ್ಕದಾಗಿ ಬೆಳೆಯತೊಡಗಿದವು .ಹಾಗೆ ನಾಗರಿಕತೆಯ ಹುಟ್ಟು ವೃತ್ತಿ ಪ್ರವೃತ್ತಿಯಾಗಿ ಬೆಳೆಯತೊಡಗಿತು. ಸಮಾಜದಲ್ಲಿ ತಮ್ಮ ಕಾಯಕಕ್ಕೆ ಸಂಬಂಧಿಸಿದ ಜಾತಿ ಪಂಗಡಗಳು ಬೆಳೆಯತೊಡಗಿದವು. ಮೂಲ ಅವಶ್ಯಕತೆಗಳ ದೊರಕಿಸಿಕೊಳ್ಳಲು ಕುಟುಂಬ ಜೀವನಕ್ಕೆ ಕಾಲಿಟ್ಟ ಮನುಷ್ಯ ಅದರದ್ದೆ ಆದ ರೂಪುರೇಷೆಗಳನ್ನು ,ಕಟ್ಟುಪಾಡು ,ಚೌಕಟ್ಟುಗಳನ್ನು ಹಾಕಿಕೊಳ್ಳತೊಡಗಿದ .ಇವರಿವರು ಹೀಗೆ ಇರಬೇಕು ಎಂಬುದಾಗಿ ನಿಯಮ ರೂಪಿಸಿದರು .ಅವರವರ ತಿಳುವಳಿಕೆ ಬುದ್ಧಿಮತ್ತೆಗೆ ತಿಳಿದಂತೆ ನಿಯಮಗಳನ್ನು ರೂಪಿಸಿಟ್ಟ.ಈ ಎಲ್ಲಾ ಪ್ರಕ್ರಿಯೆಗಳಲ್ಲಿ ಹೆಣ್ಣಿನ ತುಳಿತ ಶೋಷಣೆ ಪ್ರಾರಂಭ ಆಗಿಯೇ ಬಿಟ್ಟಿತ್ತು. ಗಂಡ ಸತ್ತು ಹೋದರೆ ಅವನೊಂದಿಗೆ ಅವಳು ಸಾಯಬೇಕು ಅದಕ್ಕೆ ಸತಿ ಸಹಗಮನ ಪದ್ಧತಿ ಎಂದು ಕರೆದರು. ಹೆಣ್ಣು ನಾಲ್ಕು ಗೋಡೆಯೊಳಗೆ ನೂರಾರು ಕಟ್ಟುಪಾಡು ಪದ್ಧತಿಗಳಿಂದ ಬಂದಿಯಾಗಿ ಬಿಟ್ಟಳು. ಅವಳ ಆಸೆ ಆಕಾಂಕ್ಷೆ ಕೇಳುವವರಿಲ್ಲ. ಹೇಳಿದಷ್ಟು ಮಾಡಬೇಕು. ಊಟವಿದ್ದರೆ ಊಣಬೇಕು ಇಲ್ಲ ನೀರು ಕುಡಿದು ಮಲಗಬೇಕು ಅಂತಹ ಸ್ಥಿತಿ ಹೆಣ್ಣಿನದು. ಹುಟ್ಟಿನಿಂದಲೇ ಬಲಿಷ್ಠನಾದ ಪುರುಷ ಸಾಕಿ ಸಲಹುವ ಶಕ್ತಿಯುಳ್ಳವ ನಾನೆಂದು ಹೆಣ್ಣನ್ನು ಆಳುತ್ತಾ ಬಂದ. ಸಾವಿರಾರು ವರ್ಷ ತುಳಿಯಲ್ಪಟ್ಟ ಹೆಣ್ಣು ಅನೇಕ ಹೋರಾಟಗಾರರು ,ಸಮಾಜ ಸುಧಾರಕರ ಸ್ತ್ರೀ ಪರವಾದಿಗಳ ಹೋರಾಟದ ಫಲವಾಗಿ ಬರ ಬರುತ್ತಾ ದುಷ್ಟ ಮೂಡ ನಂಬಿಕೆ, ಮೈಗೂಡಿಸಿಕೊಂಡವರನ್ನು ಹೊರ ತರುವ ಪ್ರಯತ್ನ ಮಾಡಿದರು. ವಿಧವಾ ವಿವಾಹದಂತಹ ಕಾಯಿದೆಗಳಿಂದ ಸಮಾನತೆಯ ಹರಿಕಾರರ ವಾದದಿಂದಾಗಿ ಹೆಣ್ಣು ತುಸು ಹುಸಿನಗೆ ಬೀರುವಂತದದ್ದು. ಅವಳು ಪಟ್ಟ ಕಷ್ಟ, ಸಂಕಷ್ಟ ,ರೋಧನೆ ಇತಿಹಾಸದ ಪುಟಗಳಲ್ಲಿ ಅಚ್ಚಾಗಿದ್ದು ಎಲ್ಲರಿಗೂ ತಿಳಿದ ವಿಷಯ. ಇಂತ ಮಹಿಳೆ ತಾನೂ ಇದರಿಂದ ಹೊರ ಬರಬೇಕು. ತನಗೂ ವ್ಯಕ್ತಿತ್ವವಿದೆ. ತನಗೂ ಒಂದು ಮನಸ್ಸಿದೆ, ಬದುಕಿದೆ, ನನ್ನದು ಒಂದು ಜೀವ ಎನ್ನುವ ತಿಳುವಳಿಕೆ ಮೂಡತೊಡಗಿ ಅಲ್ಪಸ್ವಲ್ಪ ವಿರೋಧಗಳ ತೋರುತ ಮೇಲೇಳತೊಡಗಿದಳು. ತನ್ನ ಪರಿದಿಯ ಬಿಟ್ಟು .ಕಟ್ಟುಪಾಡುಗಳ ಕಿತ್ತೆಸೆದು, ತನ್ನ ಸುತ್ತುಹಾಕಿದ ಬೇಲಿ ಮುರಿದು ಹೊರಬರತೊಡಗಿದಳು. ಧೈರ್ಯ ಬರತೊಡಗಿತು. ಅವಳಲ್ಲಿಯೂ ಎಲ್ಲಾ ಮಾಡಬಲ್ಲೆ ಎಂಬ ಶಕ್ತಿ .ಯುಕ್ತಿ ಚಾಣಾಕ್ಷತೆ, ದಕ್ಷತೆ ಎಲ್ಲಾ ಇದೆ ಎಂಬುದರ ಅರಿವಾಗತೊಡಗಿತು. ಮೈತ್ರಿ ,ಗಾರ್ಗಿಯಂತವ ಪ್ರೇರಣೆಯಿಂದ ಎಲ್ಲದಕ್ಕೂ ಎದೆ ಕೊಟ್ಟು, ನಡಕಟ್ಟಿ ನಿಂತು ಸಾಧನೆ ಗೈವ ಮನಸ್ಥಿತಿ ಬೆಳೆಸಿಕೊಳ್ಳತೊಡಗಿದಳು. ನಾವೇನು ಕಡಿಮೆ ಇಲ್ಲ ಎಂದು ಮಾಡಿ ತೋರಿದಳು. ಜೀವ ಎಲ್ಲರಿಗೂ ಒಂದೇ ಎಂದು ತಿಳಿಯಬೇಕು ಯಾರಿಗೆ ಏನು ನಾ ಕಡಿಮೆ ಇಲ್ಲ ಎಂದು ಮುನ್ನಡೆ ಇಟ್ಟ ಸ್ತ್ರೀ ಹಿಂದೆ ಸರಿಯದೆ ಮುನ್ನಡೆದ ಯಶೋಗಾಥೆ ನಮ್ಮ ಕಣ್ಮುಂದೆ ಕಾಣದೆ ಇರದು.ಹೋರಾಟ, ಸ್ವತಂತ್ರ ಹೋರಾಟಗಾರರಾದ ಚೆನ್ನಮ್ಮನ ಕೆಚ್ಚೆದೆಯ ಯುದ್ಧ, ಕೆಳದಿ ಚೆನ್ನಮ್ಮನ ದಿಟ್ಟ ನಡೆ ,ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಹೋರಾಟ, ಹೀಗೆ ನಂತರ ವಚನಕಾರ್ತಿಯರಲ್ಲಿ ಅಕ್ಕಮಹಾದೇವಿ ಮತ್ತು 12ನೇ ಶತಮಾನದಲ್ಲಿ ಬಸವಣ್ಣನವರು ಹೆಣ್ಣನ್ನು ಗೌರವಿಸಿದ್ದು. ಅವಳ ಸ್ಥಾನಮಾನ ಸಮಾನತೆ ಕಿಚ್ಚು ಹೊತ್ತಿಸಿ ತೊಡೆ ಕಟ್ಟಿ ನಿಂತರು ತಮ್ಮ ಪ್ರತಿಭೆ ಮೆರೆಯಲು ಸಹಾಯಕರಾದರು.
ಹೀಗೆ ಈಗಿನ ಶತಮಾನದಲ್ಲಿ ನೋಡಬೇಕೆಂದರೆ ಇಂದಿರಾ ಗಾಂಧಿ ಪ್ರಧಾನಿಯಾದದ್ದು, ಪ್ರತಿಭಾ ಪಾಟೀಲ್ ಅವರು ರಾಷ್ಟ್ರಪತಿಯಾಗಿದ್ದು, ಗಗನಸಕಿಯಾಗಿ ಕಲ್ಪನಾ ಚಾವ್ಲಾ, ವಿಜ್ಞಾನಿಯಾಗಿ ಅಣ್ಣಾವನಿ, ಅಸೀಮಾ ಚಟರ್ಜಿ ಹೀಗೆ ರಾಜಕೀಯ ,ಸಾಮಾಜಿಕ ,ಆರ್ಥಿಕ ಪ್ರಗತಿಯತ್ತ ತುಡಿಯುತ್ತಿರೋ ಹೃದಯ ಹೊತ್ತು ಸಾಧನೆಗೈದದ್ದು ಸ್ಮರಣಾರ್ರ .ಅನೇಕ ಮಹಿಳಾ ಹೋರಾಟಗಾರ್ತಿಯರು ತಮ್ಮ ಇರುಹು ತೋರಿಸಿಕೊಟ್ಟಿದ್ದಾರೆ. ಮಹಿಳೆಯರ ಹಕ್ಕುಗಳ ಪಡೆಯಲು ಪಣತೊಟ್ಟು ಚಳುವಳಿಯಿಂದ ಮತ ಚಲಾವಣೆ ಸಾರ್ವಜನಿಕ ಕಚೇರಿಯಲ್ಲಿ ಕೆಲಸ, ಉದ್ಯೋಗ ತರಬೇತಿ ,ತಾರತಮ್ಯವನ್ನು ವಿರೋಧಿಸಿ ಪ್ರತಿಭಟನೆ ನಡೆದಿದ್ದಾಗ ಸಾಧಾರಣ ಮಹಿಳೆಯು ಧೀರತನ ಮತ್ತು ದೃಢತೆ ದೇಶ ಹಾಗೂ ಸಮುದಾಯದ ಇತಿಹಾಸದಲ್ಲಿ ವಹಿಸಿದ ಅಸಾಧಾರಣ ಪಾತ್ರವನ್ನು ಬಿಂಬಿಸುತ್ತ ಬದಲಾವಣೆಯ ಕರೆಯನ್ನು ಅನೇಕ ಮಹಿಳೆಯರು ಕೊಟ್ಟಿದ್ದಾರೆ. 1945ರಲ್ಲಿ ಸಂಯುಕ್ತ ರಾಷ್ಟ್ರಗಳ ಅಂತರಾಷ್ಟ್ರೀಯ ಲಿಂಗ ಸಮಾನತ ತತ್ವ ಅಂಗೀಕಾರಕ್ಕೆ ಬಂದು ಅದಕ್ಕೆ ವಿಶ್ವ ವ್ಯಾಪಿ ಒಪ್ಪಂದ ನೀತಿ ನಿರ್ದಿಷ್ಟ ಮಾನ ಮಹಿಳಾ ಅಭಿವೃದ್ಧಿ ಕಾರ್ಯ ಯೋಜನೆಗಳ ಕಾರ್ಯರೂಪಕ್ಕೆ ಬಂದವು ಹೀಗೆ ಬೆಳೆದು ಬಂದ ಇತಿಹಾಸ ಸ್ಮರಿಸಿದರೆ ಮೈಮನದಿ ರೋಮಾಂಚನವಾಗುವುದು.
ಇಂದು ಮಹಿಳೆ ಅಮ್ಮನಾಗಿ, ತಾಯಿಯಾಗಿ, ಅಜ್ಜಿಯಾಗಿ ,ಮನೆ, ಮಗ ಗಂಡ, ಕುಟುಂಬ, ಸಹೋದರ, ಪ್ರಿಯತಮ, ಅಪ್ಪ ಎಲ್ಲರಲ್ಲಿ ತನ್ನ ಸಂತಸ ಕಾಣುವಂತ ದೊಡ್ಡ ಗುಣದವಳು ಹೆಣ್ಣು. ಇವಳ ನೈಜ ಸಮಸ್ಯೆಗಳ ಬಗ್ಗೆ ವಿಚಾರಿಸಿದಾಗ ಹೆಣ್ಣು ಬ್ರೂಣ ಹತ್ತೆ .ನಿಲ್ಲದ ಬಾಲ್ಯ ವಿವಾಹ ಪದ್ಧತಿ ಅತ್ಯಾಚಾರ ನಡೆಯುತ್ತಲೇ ಇದೆ .ನಾನೂ ದುಡಿಯಬಲ್ಲೆ, ಆಳಬಲ್ಲೆ ,ಗೆಲ್ಲಬಲ್ಲೆ ಎಂದು ಹೊರಬಂದ ಹೆಣ್ಣಿನ ಧೈರ್ಯದ ನಡೆ ಒಂದೆಡೆಯಾದರೆ, ಅವಳನ್ನು ಪ್ರೇರೇಪಿಸಿ ಉನ್ನತ ಸ್ಥಾನಕ್ಕೆ ಏರಿಸುತ್ತಾ ಮೇಲುಗೈ ಸಾಧಿಸಿದ್ದರು ಎಲ್ಲದರಲ್ಲಿ ಸೈನಿಸಿಕೊಂಡಿದ್ದರು ಅವಳ ಸಂಪೂರ್ಣ ಪ್ರಗತಿ ಅವಳಿಗೆ ಸಿಗುವ ಸ್ವಾತಂತ್ರ್ಯ ಸಿಗುತ್ತಲೇ ಇಲ್ಲ .ಎಂಬುದು ಚಿಂತನರವಾಗಿದ್ದು .ಲಕ್ಷಾಂತರ ಹೆಣ್ಣು ಮಕ್ಕಳು ಏಡ್ಸ್ ಗೆ ತುತ್ತಾಗಿ ಬಳಲುತ್ತಿದ್ದಾರೆ, ಸತ್ತುಹೋಗಿದ್ದಾರೆ .ಅತೀ ಹೆಚ್ಚು ಅತ್ಯಾಚಾರಗಳಿಂದ ನಮ್ಮ ಭಾರತ ದೇಶದಲ್ಲಿ ಹೆಣ್ಣು ನಲುಗಿ ಹೋಗಿದ್ದಾಳೆ. ಇಂದು ಎಷ್ಟು ಮಹಿಳೆಯರು ಕ್ಯಾನ್ಸರ್ ಗೆ ತುತ್ತಾಗಿದ್ದಾರೆ .ಉದ್ಯೋಗದ ಕೊರತೆಯಿಂದ ನಿರುದ್ಯೋಗ ಸಮಸ್ಯೆ ಅನುಭವಿಸುತ್ತಿದ್ದಾರೆ .ಎಲ್ಲಾ ಕೆಲಸ ಕಾರ್ಯಗಳ ಮಾಡುವ ಬುದ್ಧಿ ಜಾಣ್ಮೆ ,ಕುಶಲತೆ ಇದ್ದರೂ ಇನ್ನೂ ಶೇಕಡಾ 30ರಷ್ಟು ಮಹಿಳೆಯರು ಮಾತ್ರ ಪ್ರಗತಿ ಹೊಂದಿದ್ದಾರೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಇನ್ನೂ ಹಿಂದುಳಿದಿದ್ದಾರೆ .ದೇಶದ ಪ್ರಗತಿಯಲ್ಲಿ ಹೆಣ್ಣು ಮಕ್ಕಳ ಪಾತ್ರವೂ ಇದ್ದೇ ಇದೆ ಆದರೆ ಏನೆಲ್ಲಾ ಕಲಿತಿದ್ದರು ಜ್ಞಾನದಲ್ಲಿ ಮೇರುವೇ ಆಗಿದ್ದರೂ ಅವಳ ಸಾಧನೆಯ ಗರಿ ಕುಣಿಯುವಷ್ಟು ಗಗನಕ್ಕೆ ಮುಟ್ಟುವಷ್ಟು ಚಾಚುತ್ತಿಲ್ಲ ಕೆಲಸದ ಸ್ಥಳದಲ್ಲಿ ಅವಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹೆಚ್ಚಾಗುತ್ತದೆ 3 ವರ್ಷದ ಬುದ್ಧಿ ನೂರು ವರ್ಷದವರೆಗೆ ಎನ್ನುವ ಗಾದೆಯಂತೆ ಕಲಿತು ಚಳಿ ಮರಿವಲ್ಲಿ ಗಂಡೆಂಬ ಪ್ರಾಣಿ ಮುಂದು ಅವಳ ಎಷ್ಟು ಕಷ್ಟ ಕೇಳದೆ ತನ್ನ ಮೂಗಿನ ನೇರಕ್ಕೆ ಅವಳನ್ನು ನಡೆಸಿಕೊಂಡರೆ ಅವಳು ಸಂತೋಷವಾಗಿರಬಲ್ಲೆ ವಿಚಾರಿಸಿ ಕಟ್ಟಿಹಾಕಿ ದನಕ್ಕೆ ಎಷ್ಟು ಆಹಾರ ಒದಗಿಸಿದರೇನು ? ಪಂಜರದಲ್ಲಿಟ್ಟು ಗಿಳಿಗೆ ಏನನ್ನು ನೀಡಿದರೂ ಅದು ಸುಖವಾಗಿರಬಲ್ಲುದೆ??
ನಗರದಲ್ಲಿ ಹೆಣ್ಣು ಅನುಭವಿಸುತ್ತಿರುವ ತೊಂದರೆಗಳು ತೊಡಕುಗಳಿಗೇನು ಕಡಿಮೆ ಇಲ್ಲ ಹಳ್ಳಿಯಲ್ಲಿ ನಡೆಯುವ ದರ್ಪ ದೌರ್ಜನ್ಯ ಅನಾಚಾರ ಅತ್ಯಾಚಾರಗಳು ಒಂದು ರೀತಿಯರಾದರೆ ..ಇನ್ನು ಹಳ್ಳಿಗಳಲ್ಲಿ ಹಳ್ಳಿಗಳ ದೇಶ ನಮ್ಮದು ಭಾರತದ ಭವ್ಯ ಭವಿಷ್ಯ ನಮ್ಮ ಹಳ್ಳಿಗಳಲ್ಲಿ ಅಡಗಿದೆ ಎಂಬ ನುಡಿಯನ್ನ ನಾವು ಕೇಳುತ್ತೇವೆ. ಹಳ್ಳಿಯ ಹೆಣ್ಣು ದಿಲ್ಲಿಯಲ್ಲಿರುವಂತಾಗಬೇಕು. ಆರ್ಥಿಕ, ಸಾಮಾಜಿಕ, ರಾಜಕೀಯ ರಂಗದಲ್ಲಿ ಎಲ್ಲರೂ ಸಮಸಮ ಭಾಗ ದೊರೆಯಬೇಕು. ಹಳ್ಳಿಯ ಮಹಿಳೆ ಸುಖಿಯಾಗಿಲ್ಲ. ಅವಳ ಸಮಸ್ಯೆ ಕೇಳುವವರಿಲ್ಲ. ಬಾಲ್ಯ ವಿವಾಹ ಅತ್ಯಾಚಾರಗಳು ನಡೆಯುತ್ತಲೇ ಇವೆ. ಅವಳ ಅಂತರಂಗ ಅರಿಯುವವರಿಲ್ಲ .ಅವಳ ಸುಖ-ಶಾಂತಿ ಬಯಸುವವರಿಲ್ಲ. ಜೀತದಾಳಂತೆ ಇರುವ ಪರಿಸ್ಥಿತಿ ಇನ್ನೂ ಕೂಡ ಇದೆ. ವರದಕ್ಷಿಣೆಯ ಪಿಡುಗು ತೊಡಗುತ್ತಿಲ್ಲ .ಹಳ್ಳಿಗಳಲ್ಲಿ ಅವಿದ್ಯಾವಂತ , ಅನಾಗರಿಕ ನಡೆಗಳಿಂದ ಗಂಡು ಪ್ರಾಣಿ ಕುಡಿತ ದೂಮ್ರಪಾನಗಳ ದಾಸನಾಗಿ, ಚಟ ವ್ಯಸನಗಳಿಗೆ ಬಲಿಯಾಗಿ ಹೆಣ್ಣನ್ನು ಹೊಡೆಯುವ, ಬಡಿಯುವ,ಶೋಷಿಸುವ ಗಂಡುಗಳಿದ್ದಾರೆ, ಚಟ ವ್ಯಸನಗಳಿಗೆ ಬಲಿಯಾಗಿ ,ಮದುವೆಯಾಗಿ ಎರಡು ,ಮೂರು ಮಕ್ಕಳ ಹುಟ್ಟಿಗೆ ಕಾರಣರಾಗಿ ಸತ್ತು ಹೋಗುತ್ತಿದ್ದಾರೆ. ಗಂಡ ಸತ್ತ ಹೆಣ್ಣಿಗೆ ಇನ್ನೂ 20 22 ಹರೆಯದ ವಯಸ್ಸು ಇದ್ದರೂ ಕೂಡ ಹೆಣ್ಣು ಸಹಿಷ್ಠು ,ವೀರಶೀರೋಮಣಿ ಎಂಬ ಬಿರುದುಗಳಿಗೆ ಹೊರತಾಗಿಲ್ಲ. ಹೆಣ್ಣು ತಾಳ್ಮೆ ಮೈಗೂಡಿಸಿಕೊಂಡು, ಕಷ್ಟವನೇ ಉಂಡು ,ತನ್ನೆಲ್ಲ ಸುಖ ಮರೆತು ತನ್ನ ಮಕ್ಕಳನ್ನು ಸಾಕುವ ಭಾರ ಹೊತ್ತು, ಏನೇ ಬಂದರೂ ಸಹಿಸಿ ಮುನ್ನಡೆಯುತ್ತಿದ್ದಾಳೆ .ಆದರೂ ಅವಳಿಗೂ ಒಂದು ಮನಸ್ಸಿದೆ ಎಂದು ಯೋಚಿಸುವವರು ಇಲ್ಲ. ಅವಳ ಮೇಲೆ ನಡೆಯುವ ಹಿಂಸೆ ಕಡಿಮೆ ಇಲ್ಲ. ಕುಟುಂಬದ ಕಣ್ಣಂತಿರುವ ಈ ಹೆಣ್ಣು ಮನಿ ,ಮಕ್ಕಳು, ಮಾವ ,ಅತ್ತೆ ನಾದಿನಿ, ಮೈದುನ ಹೀಗೆ ಕುಟುಂಬದ ಎಲ್ಲರ ಭಾರ ಹೊತ್ತು ಶುಶ್ರೂಷೆ ಮಾಡುತ ಕೂಲಿನಲಿ ಮಾಡಿ ಮಕ್ಕಳ ಕಲಿಕೆ ಅಡಿಗೆ ಮಾಡಿ ಎಲ್ಲರ ಹೊಟ್ಟೆ ತುಂಬಿಸುತ್ತಾ ಉರಿಯೋ ದೀಪದಂತೆ ಕರಗೊ ಮೀನದಂತೆ ಕರಗುತ್ತಲೇ ಇದ್ದಾಳೆ. ಕಷ್ಟದ ನೋಗ ಒಂದಿಲ್ಲ ಒಂದು ರೀತಿಯಲ್ಲಿ ಆಕೆಯ ಹೆಗಲೇರಿ ಕುಳಿತೇ ಬಿಟ್ಟಿದೆ .ಮತ್ತಷ್ಟು ಭಾರ ಹೊರಿಸುವವರೇ ಎಲ್ಲರೂ. ವಿಧವಾ ವಿವಾಹ ಎಂಬ ಕಾಯಿದೆ ಇದ್ದರೂ ಹೆಣ್ಣು ಹೆತ್ತ ಮಕ್ಕಳ ಎಸೆದು ಹೋಗಲಾರಳು, ಜೀವನಪೂರ್ತಿ ಇತರರಿಗಾಗಿ ತನ್ನ ಜೀವ ತೇಯುತ್ತಲೇ ಇರುತ್ತಾಳೆ. ಸಮಾಜದ ವಕ್ರ ದೃಷ್ಟಿಯಿಂದ ನರಳುತ್ತಲೇ ಇದ್ದಾಳೆ .ಸುಖವೆಂಬುದು ಮರೀಚಿಕೆಯಾಗಿದೆ .ಸಮಾನತೆಯ ಶಾಸನವಿದ್ದರೂ, ಸುಧಾರಕರ ಚಳವಳಿಗಳ ಕ್ರಾಂತಿಗಳಿಂದ ಕಷ್ಟದ ಕೂಪದಿಂದ ಎತ್ತಿ ಹಿಡಿದಿದ್ದರೂ .ಅವಳ ಸ್ವಾತಂತ್ರ್ಯದ ಸುಖ ಇನ್ನೂ ಅವಳಿಗೆ ದೊರಕುತ್ತಿಲ್ಲ. ಅವಳ ಮೇಲಾಗುವ ಅನ್ಯಾಯಗಳು ತಪ್ಪುತಿಲ್ಲ .ಕಿರುಕುಳ ತಪ್ಪುತಿಲ್ಲ .ಊಳುವ ಎತ್ತಿನಂತೆ ದಿನ ಬೆಳಗಾದರೆ ಅವಳು ಕೆಲಸ ಪ್ರಾರಂಭಿಸುತ್ತಲೇ ಇರಬೇಕು ಮಲಗುವವರೆಗೆ ಕಣ್ಣು ಮುಚ್ಚುವಂತಿಲ್ಲ .ಸುಖಿಯಾಗಿರುವವರು ಒಂದು 30% ಇರಬಹುದೇನೋ ನಮ್ಮ ದೇಶದಲ್ಲಿ.
ಇನ್ನು ನಗರಗಳಲ್ಲಿ ಗಂಡ ಹೆಂಡತಿ ಇಬ್ಬರದು ದುಡಿಮೆ. ನಗರ ಜೀವನ ದುಬಾರಿ ಇರುವುದರಿಂದ ಹಣದ ಅವಶ್ಯಕತೆಯಿಂದಾಗಿ ಸಿಕ್ಕ ಕೆಲಸಗಳಲ್ಲಿ ಸ್ತ್ರೀ ನಿರತಳಾಗಿದ್ದಾಳೆ .ಮಕ್ಕಳ ಪಾಲನೆ ಪೋಷಣೆ ಮನೆಯ ಜವಾಬ್ದಾರಿ ಮತ್ತು ತನ್ನ ಕಚೇರಿಯ ಕೆಲಸಗಳಿಂದಾಗಿ ಒತ್ತಡದಲ್ಲಿ ನರಳುವ ಸ್ಥಿತಿ. ಏನೆಲ್ಲಾ ಇದ್ದರೂ ಉನ್ನಲು ವೇಳೆ ಇಲ್ಲ ದನಿವಾರಿಸಿಕೊಳ್ಳಲು ಸಮಯವಿಲ್ಲ ,ಉಸಿರುಗಟ್ಟಿದ ವಾತಾವರಣ ಅವಳನ್ನು ಹಿಂಡುತ್ತಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಸುಸ್ತೋಗುತ್ತಿದ್ದಾಳೆ .ನಾನೇನೂ ಕಡಿಮೆ ಇಲ್ಲ ಎನ್ನುವ ಸ್ತ್ರೀ ಇಂದು ಎಲ್ಲರಂಗಗಳಲ್ಲಿ ಶಿಕ್ಷಕಿಯಾಗಿ ಉಪನ್ಯಾಸಕಿಯಾಗಿ ,ಗುಮಾಸ್ತರಿಯಾಗಿ, ಡ್ರೈವರ್ ಕಂಡಕ್ಟರ್ ,ಶೈನಿಕ ,ಕೃಷಿ ,ವಿಜ್ಞಾನ ಅವಿಷ್ಕಾರಗಳಲ್ಲಿಯೂ ಕೂಡ ತನ್ನ ಶಕ್ತಿ ತೋರುತ್ತಿದ್ದಾಳೆ ಎಂಬುದು ಹೆಮ್ಮೆಯ ಸಂಗತಿ. ಆದರೆ ಅವಳಿಗೆ ಸಿಗಬೇಕಾದ ಶಾಂತಿ ಸಮಾಧಾನ ನೆಮ್ಮದಿ ಪ್ರೀತಿ ಸಹಕಾರಗಳು ಸಿಗುತ್ತಲೇ ಇಲ್ಲ ಎಂಬುದು ಚಿಂತನಾಹ೯ವಾದ ವಿಷಯ.
ಇಂದಿನ ಕಾಲಘಟ್ಟದಲ್ಲಿಯೂ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ,ವರದಕ್ಷಿಣೆ ,ದೌರ್ಜನ್ಯ, ಅತ್ಯಾಚಾರಗಳಂತಹ ದುಷ್ಟಾಚಾರಗಳಿಗೆ ತೆರೆ ಬೀಳುತ್ತಿಲ್ಲ ,ಸುಭಿಕ್ಷ ಸಮಾಜ, ಸದೃಢ ಸಮಾಜ ನಿರ್ಮಾಣವಾಗುತ್ತಿಲ್ಲ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ* “ತ್ಯಾಗಮಯಿ , ನಿಸ್ವಾರ್ಥಿ ಅವಳ ನಗು ನಮ್ಮ ಮನೆಯ ದೀಪ ಎನ್ನುವವರಿಲ್ಲ. ಅವಳ ನಗುವಿನಲ್ಲಿ ನಮ್ಮ ಸಂತಸ ಪ್ರಗತಿ ಅಡಗಿದೆ ಎಂಬರಿವಿಲ್ಲ. ಅವಳ ಗೋಳು ತಾಳ್ಮೆಯಿಂದ ಕೇಳುವವರಿಲ್ಲ .ಅವಳು ನಿರ್ವಹಿಸುತ್ತಿರುವ ಪಾತ್ರಗಳು ಹತ್ತು ಹಲವು .ಎಲ್ಲಾ ಪಾತ್ರಗಳಿಗೆ ನ್ಯಾಯ ಒದಗಿಸಲು ಹೇನಗಾಡುತ್ತಿದ್ದಾಳೆ. ಹೆಣ್ಣು ಮೋಸ, ವಂಚನೆಗಳ ಬಲಿಗೆ ಸಿಲುಕಿ ನಲುಗುತ್ತಿದ್ದಾಳೆ. ಮಹಿಳಾ ದಿನಾಚರಣೆ ಆಚರಿಸುವ ಪ್ರತಿವರ್ಷ ಮಹಿಳೆಯ ಶ್ರೇಯೋಭಿವೃದ್ಧಿಗಾಗಿ ಏಳಿಗೆಗಾಗಿ ವಿಶೇಷ ಸೌಕರ್ಯ ಸೌಲಭ್ಯಗಳು ದೊರಕಿ ಅವಳ ಜೀವನ ಉತ್ತಮವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರದ್ದು ಇದೆ. ಸ್ತ್ರೀಯ ಏಳಿಗೆಯಿಂದ ದೇಶದೆಳ್ಗೆ ಆಗದಿರುವುದು. ,
ಇಂದಿನ ಹೆಣ್ಣಿನ ಚಿತ್ರಣವನ್ನು ನೋಡಿದರೆ ಅರ್ಧದಷ್ಟು ಮಹಿಳೆಯರು ಮಾತ್ರ ಸಂತೋಷವಾಗಿದ್ದಾರೆ ಅನಿಸುತ್ತದೆ .ಪುರುಷರಿಗೆ ಸಮಾನವಾಗಿ ಬೆಳೆದು ನಿಂತಿದ್ದರೂ ಎಲ್ಲ ಕ್ಷೇತ್ರದಲ್ಲಿಯೂ ಅವಳ ಕೈ ಮೇಲಾಗಿದ್ದರೂ ಹೆಣ್ಣನ್ನು ಒಂದು ವಸ್ತುವನ್ನಾಗಿ ಬಳಸಿಕೊಳ್ಳುವ ಪ್ರವೃತ್ತಿ ಇಂದಿಗೂ ಮುಂದುವರಿದಿದೆ. ಅಂದಿನ ಋಷಿಮುನಿಗಳೇ ಇವರಿಗೆ ಮಾದರಿಯಾಗಿರಬಹುದು .ಏನೋ ಹೆಣ್ಣು ಹೊನ್ನು ಮಣ್ಣು ಎಂದು ಭೋಗಿಸುವ ವಸ್ತುವಿನಲ್ಲಿ ಹೆಣ್ಣನ್ನು ಸೇರಿಸಿ ಕೇವಲ ಮನೋರಂಜನೆಗಾಗಿ ಬಳಸಿಕೊಳ್ಳುವ ಮನಸ್ಥಿತಿಗಳು ಎಂದು ಹಾಳಾಗಿ ಹೋಗುತ್ತವೆಯೋ ಆವಾಗ ಮಹಿಳೆಯರ ಪೂರ್ಣ ಸಬಲೀಕರಣ ಸಾಧ್ಯ.
ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಸ್ತ್ರೀ ಸಮೂಹ ತನ್ನ ಶಕ್ತಿ ಏನು ಎನ್ನುವುದನ್ನು ಸಮಾಜಕ್ಕೆ ಇನ್ನೂ ದೃಢವಾಗಿ ತೋರಬೇಕಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು, ಮಕ್ಕಳು ಸಾಮಾಜಿಕ ಜಾಲತಾಣಗಳತ್ತ ಆಕರ್ಷಿತರಾಗಿ ಯಶಸ್ಸನ್ನು ಕುಂದಿಸಿಕೊಳ್ಳುತ್ತಿದ್ದಾರೆ. ತಮ್ಮ ದಾರಿಗೆ ಅಡೆತಡೆಗಳನ್ನು ಉಂಟು ಮಾಡಿಕೊಳ್ಳುತ್ತಿದ್ದಾರೆ ಎನಿಸುತ್ತದೆ. ಇಂದಿಗೂ ಹಳ್ಳಿಗಳಲ್ಲಿ ನೋಡಿದಾಗ ಮಹಿಳೆಗೆ ಸಿಗಬೇಕಾದ ಕನಿಷ್ಠ ಸ್ವಾತಂತ್ರ್ಯವೂ ಸಿಗುತ್ತಿಲ್ಲ ಎಂಬುದು ವಿಪರ್ಯಾಸ .ಮಹಿಳೆ ಎಷ್ಟೇ ಸಾಧನೆ ಮಾಡಿದ್ದರೂ, ಆರ್ಥಿಕವಾಗಿ ,ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬಂದಿದ್ದರು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬದುಕುವ ಅನಿವಾರ್ಯವೂ ಅವಳ ಮುಂದೆ ಇದೆ .ಎಲ್ಲ ಪುರುಷರ ಜೀವನದಲ್ಲೂ ಮಹಿಳೆಯ ಪಾತ್ರ ಅಗಾಧ. ಕುಟುಂಬ, ಮನೆ ,ಮಕ್ಕಳು ಎಲ್ಲವನ್ನು ಸಂಭಾಳಿಸಿಕೊಂಡು ಬದುಕು ಸಾಗಿಸಿಕೊಂಡು ಹೋಗುವ ಜಾಣ್ಮೆ ಇವಳಿಗಿದೆ, ದೇವರು ಆ ಶಕ್ತಿ ಕೊಟ್ಟು ಸಲುಹಲಿ . ಹೆಣ್ಣು ಸಮಾಜದ ಕಣ್ಣು ಅದಕ್ಕೆ ಅವಳನ್ನು ದರಿತ್ರಿ, ಧಾತ್ರಿ, ತಾಯಿ ,ದೇವಿ, ಸಿರಿದೇವಿ ಹೀಗೆಲ್ಲ ಕರೆಯುವುದು. ಆದರೂ ಅನಾದಿಕಾಲದಿಂದ ಇವಳನ್ನು ಎರಡನೇ ಪ್ರಜೆಯಾಗಿ ಕಾಣುತ್ತಿರುವುದು ಸೂಚನೆಯ ಸಂಗತಿ. ಈ ಮಹಿಳೆ ಅಬಲೆಯಲ್ಲ ಸಬಲೇ . ಎಲ್ಲವನ್ನು ಮಾಡಬಲ್ಲಳು ಎಂದು ಹೇಳಬಹುದು .ಆದರೆ ಎಷ್ಟರಮಟ್ಟಿಗೆ ಇಡಿ ಸ್ತ್ರೀ ಕುಲ ಸಬಲರಾಗಿದ್ದಾರೆ? ಎಂಬ ಚಿಂತನೆ ಮಾಡುವ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೆಲ್ಲ ಇಂದು ಇದ್ದೇವೆ ,ಜೀವನ ಹೆಣ್ಣು ನಿಭಾಯಿಸುವಷ್ಟು ಪುರುಷನಿಗೆ ಸಶಕ್ತವಾಗಿ ನಿರ್ವಹಿಸಲು ಆಗುವುದಿಲ್ಲ ಆದರೂ ಕೂಡ ಪುರುಷ ತನ್ನ ಪ್ರಾಧಾನ್ಯತೆಯನ್ನ ಬಿಟ್ಟುಕೊಡಲಾರ. ಸಮಾಜದಲ್ಲಿ ಹೆಣ್ಣು ಗಂಡೆಂಬ ಭೇದ ಮರೆತು ಇಬ್ಬರಿಗೂ ಕೂಡ ಸಮಾನ ಸ್ಥಾನಮಾನ ಸಮಾನ ಗೌರವಗಳು ಸಮಾನ ಅವಕಾಶಗಳು ಸಿಗುವಂತಾಗಲಿ ಎಂದು ಹೇಳುತ್ತಾ
ಎಲ್ಲ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳೊಂದಿಗೆ ನನ್ನ ನೂರು ಹೃದಯಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ಡಾ ಅನ್ನಪೂರ್ಣ ಹಿರೇಮಠ