ಕಾವ್ಯ ಸಂಗಾತಿ
ನಾಗರತ್ನ ಎಚ್ ಗಂಗಾವತಿ
ಸಹನಾ ಮೂರ್ತಿ
ಹೆಣ್ಣಿವಳು ಸಂಸಾರದ ಕಣ್ಣು ಇವಳು
ಮನೆ ಮನಗಳ ಬೆಳಕು ಇವಳು
ಮತೆಯ ಮಾತೆಯು ಜಗವ ಬೆಳಗಿಳು
ಕಷ್ಟ ಸುಖದಿ ಎಲ್ಲರೊಟ್ಟಿಗೆ ನಲಿಯುವಳು.
ಸಹನೆ ಭೂಮಿಯಂತೆ ಕರುಣೆಯು ಕಡಲಂತೆ
ನೋವನ್ನು ಸಹಿಸಿಕೊಂಡು ನಡೆದಾಕೆ
ಸಂಸಾರದ ನೌಕೆಯನ್ನು ಹೊತ್ತು ನಡೆಸಿದಾಕೆ.
ನಿನ್ನ ಸಹನೆಗೊಂದು ನಮನ.
ಎಲ್ಲರ ಬಾಳಲಿ ಹೆಣ್ಣೊಂದು ಚೇತನ
ವಿದ್ಯಾ ಬುದ್ಧಿಯ ಕಲಿಸಿ ಬೆಳಕ ಹರಸಿ
ಮಕ್ಕಳ ಹಸಿವ ನೀಗಿಸಿದಾಕೆ ನಿನಗೆ
ಸಾವಿರ ಸಾವಿರ ವಂದನೆಗಳು ನಮಿಸಿ.
ಕಲ್ಪನ ಗೆ ನಿಲುಕದವಳು ಆಸರೆಗೆ ಬೆಳಕು ಇವಳು
ಮನೆ ಅಂಗಳದ ಆಡಿ ಬೆಳದಾಕೆ
ನಿನ್ನ ಋಣವ ತೀರಿಸಲು ಈ ಜನ್ಮದಲ್ಲಿ ಸಾಧ್ಯವೇ.
ನೀನು ಇದ್ದ ಮನೆಯಲ್ಲಿ ನಂದನವನದಂತೆ
ಎಲ್ಲಿ ನೋಡು ರಂಗೋಲಿಯ ರಂಗಂತೆ.
ಜಗತ್ತಿನ ಎಲ್ಲಾ ಕ್ಷೇತ್ರದಲ್ಲೂ ನೀನಿರುವೆ
ನಿನ್ನ ಸಾಧನೆಗೆ ಎಂದು ಹೀಗೆ ಇರಲಿ.
ಬದುಕಲಿ ನಿನ್ನಿಂದ ಕಟ್ಟಲು ಆಶಾ ಗೋಪುರ
ಬಾಳಲ್ಲಿ ಗೆಲುವಿನ ಬೆಳಕ ಸಡಗರ//೫//
———————
ನಾಗರತ್ನ ಎಚ್ ಗಂಗಾವತಿ