ಇಮಾಮ್ ಮದ್ಗಾರ ಕವಿತೆ-ದುಂಡು ಮಲ್ಲಿಗೇ..

ಮಳೆಬಿದ್ದು ಹಸಿಯಾದ
ನೆಲದಂತಾಗಿದೆನ್ನ ಮನಸು
ಸಹನೆಯ ಪರಿಚಯವಿಲ್ಲ
ದೆದೆಯಲಿ ನೂರಾರು
ಕನಸು

ನಾ ತಣ್ಣಗೆ ಗದರಿದರೇ
ನೀ ಸಣ್ಣಗೆ ಅಳುವದ
ನೆನೆದು ಮನಸೀಗ
ಬಿಕ್ಕುತಿದೆ

ನಾ ಬಾಗಿದಾಗ ನಿನ್ನ
ಮುಂಗುರುಳು ನನ್ನ
ಹಣೆಯ ತಾಕಿದಾಗ ಆಗುವ
ಪುಳಕ ನೆನೆದು ಮನಸೀಗ
ನಗುತಿದೆ

ಮೋಹಕ್ಕೆ ಜಾಗವಿಲ್ಲ
ಒಲವಿನಲಿ
ಒಲವಿರುವದಿಲ್ಲ
ಮೋಹದಲಿ
ಕರುಣೆಯಲಿ ಹುಟ್ಟಿದ
ಪ್ರೀತಿಗೆ ಮಮತೆ ಜಾಸ್ತಿ
ಮೋಹಕ್ಕಹಂಕಾರ ಜಾಸ್ತಿ

ನೊಂದ ಮನಸಿನಲಿ
ಚಂದದ ಕನಸು !
ಸುಂದರ ಭಾವಗಳಲಿ
ಅಂದದ ವಿರಹ !

ನೀನೆಂದರೆ…
ದುಂಡು ಮಲ್ಲಿಗೆ ನನ್ನ
ತೋಳಲ್ಲೇ…. ಬಂಧಿ
ಯಾಗಿರ ಬೇಕೆಂಬ
ಹಠವಿಲ್ಲ ನನಗೆ

——————————–

Leave a Reply

Back To Top