ಗಂಗಾಧರ ಅವಟೇರ ಹೈಕುಗಳು

ಮಾಡಬೇಡವೇ
ಬಡಿವಾರವ ನೀನು,
ಬಡ ಹೆಂಡತಿ
*
ಬಂಗಾರ ಮೋಹ
ನಿನಗ್ಯಾಕೆ ಗೆಳತಿ
ಚಿನ್ನದಾಂತಾಕಿ.
*
ಚಲುವೆ ನೀನು
ಒಲವು ತುಂಬಿದ ಹೂ;
ನಾನೊಂದು ದುಂಬಿ.
*
ನೀ ಕಾಣದ ಕ್ಷಣ
ಜಗವೇ ಶೂನ್ಯ ; ಬರ
ಬಂದು ನಿಂತಂತೆ.
*
ದೇವರೆ ಬಂದು
ನೆಲೆಸು,ಮಂದಿರದಿ,

ಸತ್ತ ವಿವಾದ.


One thought on “ಗಂಗಾಧರ ಅವಟೇರ ಹೈಕುಗಳು

Leave a Reply

Back To Top