ಹೆಚ್. ಎಸ್. ಪ್ರತಿಮಾ ಹಾಸನ್ ಕವಿತೆ ಉಪಕಾರವನು ಮಾಡು

ಶಾಂತಿಯೆಂಬುದು ಮುಖ್ಯ ಜೀವನಕೆ
ಬ್ರಾಂತಿಯಾಗದೆ ಬಾಳುವುದು ಕಲಿ ಸಂತಸಕೆ
ಅಂಕು-ಡೊಂಕಿನ ರಸ್ತೆಯ ಬದುಕು ಇದು
ತ್ಯಾಗ ಬೇಕು ಯಾರ ಹಂಗಿಲ್ಲದೆ ಸಾಗು…

ಮನಸು ಮಾಡಿದರೆ ಮಾತ್ರ ಸಾಗುವೆ ವು ನಾವು
ಕನಸಾಗುವ ರೀತಿಯಲಿ ಇರಬೇಕು ನೋವು
ಕಷ್ಟದ ನೆರಳುಗಳ ಸೋಕದಂತೆ ನಡೆಯಬೇಕು
ಎಲ್ಲರ ಪ್ರೀತಿಗೆ ಸದಾ ಪಾತ್ರರಾಗಬೇಕು….

ಉಪಕಾರವನು ಮಾಡು ಅಪಕಾರ ಮಾಡದೆಯೇ
ಸಂಸ್ಕಾರವ ಮರೆಯದೆ ಸಾಗುತಿರು ಮರೆಯದೆಯೇ
ಭರವಸೆ ಕೊಟ್ಟವರು ಈಗಿಲ್ಲದಿರಬಹುದು
ಸಂಬಂಧಿಕರು ಈಗ ಜೊತೆಗಿರದಿರಬಹುದು…..

ನಿನ್ನ ಕಾರ್ಯಗಳೇ ಅವರ ಆಹ್ವಾನ ಮಾಡುವುದು
ಮರೆಯದೆಯ ಛಲದಿಂದ ಕಾರ್ಯವ ಮಾಡು
ಕಾದ ಕಾವಲಿಯಂತೆ ಆಗದಿರು ಶಾಂತಿಯಲಿ
ನಿರ್ಮಲವಾದ ನೀರಿನಂತೆ ಇದ್ದು ಸಾಗುತಿರು….

ನೆಟ್ಟ ಸಸಿ ಕಷ್ಟಪಡುವುದು ಬೆಳೆಯಲು
ನೀರಿರದಿದ್ದರೆ ಅದು ನಶಿಸುವುದು ತಿಳಿ
ಮನುಜನಿಗೂ ಬೇಕು ಧೈರ್ಯವು
ಆಗುವುದು ಎಲ್ಲಾ ಕಾರ್ಯ ನಿರಳವಾಗಿ…..


Leave a Reply

Back To Top