ಕಾವ್ಯ ಸಂಗಾತಿ
ಶೋಭಾ ನಾಗಭೂಷಣ
‘ಮನದ ಹಾಯ್ಕುಗಳು’
ಮನೆಯಲ್ಲಿಯ
ಬೆಳಕು ನೀನೆಂದಿಗೂ
ಬಂಗಾರಿ ಬಾಲೆ
ಕಿಚ್ಚು ತಣಿಸಿ
ಮರುಗದಿರು ನೀನು
ಒಳಗೊಳಗೇ
ಆಟವಲ್ಲವೋ
ಈ ಜೀವನವು ಬೇಡ
ಸಂಕಲ್ಪತೊಡು
ಗುರಿಯಿರಲಿ
ಮುಂದೆ ಸಾಗುವ ಹಾದಿ
ಸುಗಮವಲ್ಲ
ಪ್ರತಿಕ್ಷಣವೂ
ಸವಾಲು ನಿನ್ನ ಮುಂದೆ
ಮುನ್ನಡೆ ನೀನು
ಮುಖದ ಕಾಂತಿ
ಬೆಳಗುತಿರಲೆಂದು
ನಗೆಯು ತುಂಬಿ
ಶೋಭಾ ನಾಗಭೂಷಣ
ಉತ್ತಮವಾದ ಹಾಯ್ಕು ಚೆನ್ನಾಗಿದೆ