ಕಥಾ ಸಂಗಾತಿ
ಅನಸೂಯ ಜಹಗೀರದಾರ.
ಪಡೆದದ್ದು
ಆತ ಆಸ್ಪತ್ರೆಯ ಆ ವಾರ್ಡಿನ ಮುಂದೆ ಶಥಪಥ ಅಡ್ಡಾಡುತ್ತಿದ್ದ.
ಇನ್ನೇನು ಕೆಲವೇ ನಿಮಿಷಗಳಲ್ಲಿ ಮಗುವಿನ ಅಳುವಿನ ದನಿ ಕೇಳಬಹುದು. ಮನೆಗೊಬ್ಬ ಪುಟ್ಟ ಒಡೆಯನ ಆಗಮನ..ಗಂಡು ಮಗುವಾಗಬೇಕು..ಆಗಿಯೇ ಆಗುತ್ತದೆ..ತನ್ನಾಸೆ ಹುಸಿಯಾಗಲು ಹೇಗೆ ಸಾಧ್ಯ…?!ಅಲ್ಲದೆ ಆತನ ಮನೆಯವರು ಬಳಗದ ಅಪೇಕ್ಷೆಯೂ ಅದೇ ಆಗಿತ್ತು..ಅವರ ಅಂತಹ ಮಾತುಗಳು ಆಕೆಗೊಮ್ಮೊಮ್ಮೆ ಒತ್ತಡವೆನಿಸುತ್ತಿತ್ತು…ಆತನ ಮುಂದೆಯೂ ಹೇಳಿಕೊಂಡಿದ್ದಳು. ಆದರೆ ಆತನ ವಿಚಾರವೇ ಬೇರೆ..ಪುತ್ರಪ್ರೇಮ..
ಮನದಲ್ಲಿಮೂಡುವ ಪ್ರಶ್ನೆ.. ಕಳವಳ..ಇನ್ನೇನು ಕೆಲವೇ ನಿಮಿಷಗಳಲ್ಲಿ ಗೊತ್ತಾಗುತ್ತದೆ.
ಆಕೆಯನ್ನು ಪರೀಕ್ಷಿಸುತ್ತಿದ್ದ ವೈದ್ಯರು ಮಗು ಆರೋಗ್ಯವಾಗಿದೆ ಎಂದು ಹೇಳುತ್ತಿದ್ದರೆ ವಿನಃ ಮಗುವಿನ ಲಿಂಗ ಹೇಳಲಿಲ್ಲ.
ಯಾರಾದರೇನು..ನಿಮಗೆ ..ಅನ್ನುತ್ತ ಮಾತಿನಲ್ಲಿ ತೇಲಿಸಿಬಿಡುತ್ತಿದ್ದರು. ಬೆಳಿಗ್ಗೆ ಯೇ ಹೆರಿಗೆ ನೋವು ಕಾಣಿಸಿಕೊಂಡು ಬರುವುದಾಗಿತ್ತು..ಇನ್ನೇನು..ಮಗುವಿನ ಅಳು ಕೇಳುವ ಭಾಗ್ಯ ಎಂದುಕೊಳ್ಳುತ್ತಿದ್ದಾಗಲೇ ಮಗು ಜೋರಾಗಿ ಕಿರುಚಿ ಅತ್ತ ದನಿ..
ಆತ ಪುಳಕಗೊಂಡ..ನರ್ಸ ಓಡುತ್ತ ಬಂದು ಗಂಡು ಮಗುವೆಂದು ತಿಳಿಸುತ್ತಾಳೆ.ನಿರೀಕ್ಷಿಸತೊಡಗಿದ..
ಆತನ ನಿರೀಕ್ಷೆ ಹುಸಿಯಾಗಲಿಲ್ಲ
ನರ್ಸ ಓಡುತ್ತಲೇ ಬಂದಳು.
ಗಂಡು ಮಗುವೆಂದೇ ತಿಳಿಸಿದಳು.
ಆತನ ಮುಖ ಅರಳುವುದಕ್ಕೆ ಮುನ್ನ ಮತ್ತೊಂದು ಸುದ್ದಿ ಅರುಹಿದಳು..ಆಘಾತಕಾರಿ ಸುದ್ದಿ…ತೀವ್ರ ರಕ್ತ ಸ್ರಾವದಿಂದ ಹಠಾತ್ ಆಗಿ ಕಡಿಮೆ ರಕ್ತದೊತ್ತಡ ಉಂಟಾಗಿ ಮಗುವಿನ ತಾಯಿ ಬದುಕುಳಿದಿರಲಿಲ್ಲ…ಈ ಸುದ್ದಿ ಅರಗಿಸಿಕೊಳ್ಳಲು..ಆತ ಹರಸಾಹಸ ಪಡುತ್ತಿದ್ದ.”ಹೆಣ್ಣಾಗಲಿ ಗಂಡಾಗಲಿ ಅದು ನಮ್ಮ ಮಗು ರೀ…ರಿಲ್ಯಾಕ್ಸ ಆಗಿರಿ..ನೀವು ಟೆನ್ಷನ್ ಮಾಡ್ಕೊಂಡು ನನಗೂ ತರ್ತೀರಿ..” ಅನ್ನುತ್ತಲಿದ್ದ ಆಕೆಯ ನೀರು ತುಂಬಿದ ಕಣ್ಣುಗಳು ನೆನಪಾದವು..ಆತ ಅಲ್ಲೇ ಕುಸಿದು ದುಃಖಿಸತೊಡಗಿದ...!
ತನ್ನಿಷ್ಟದಂತೆಯೇ ಗಂಡು ಮಗುವಾಗಿತ್ತು..ಆದರೆ ಅದರ ತಾಯಿ…?! ತಾನು ಪಡೆದದ್ದು ಏನು ಮತ್ತೆ ಕಳೆದುಕೊಂಡದ್ದೇನು…?! ವಿಚಾರ ಕೊರೆಯುತ್ತಿತ್ತು ಆಕೆಯ ಶವದಂತೆ ತಣ್ಣಗೆ…!
ಅನಸೂಯ ಜಹಗೀರದಾರ.
ಚಂದವಾದ ಪುಟ್ಟ ವಿಚಾರಕ್ಕೆ ಒಳಪಡಿಸುವ ಕತೆ. ಅಭಿನಂದನೆಗಳು
ಧನ್ಯವಾದಗಳು ಸರ್.
ಅಳಿಸ ಬೇಡಿ…..
ಈಗಾಗಲೆ ಹೆಣ್ಣಿನ ಸಂತತಿ ಕಡಿಮೆಯಾಗುತ್ತಿದೆ
ಮತ್ತೆ ಗಂಡೆ ಬೇಕಾ….
ಏನಾದರೂ ಸರಿ ನಿಮ್ಮ ನಿರೂಪಣೆ ಸೊಗಸಾಗಿದೆ…
ಶರಣು
ಧನ್ಯವಾದಗಳು..!