ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಗಜಲ್
ಹೂವು ಕಟ್ಟಿ ಹೊಸ ಸೀರೆಯುಟ್ಟುಕೂಸು ತಯಾರಾಗಿದ್ದಾಳೆ ಹುಷಾರಾಗಿರಲಿ
ಉದಯದಿ ಅರಳಿ ನಸುನಗುವ ಗಂಧವತಿ ಹೂವಾಗಿದ್ದಾಳೆ ಹುಷಾರಾಗಿರಲಿ
ಅಲಂಕರಿತ ಗೊಂಬೆ ನಾಜೂಕು ಮಣಿ ಕಾಳ ನೇತ್ರಗಳ ಕೆಟ್ಟ ಕಣ್ಣು ಸುತ್ತ
ದಾರಿ ಮದ್ಯಕ್ರೂರ ಖಳರ ಕೈಗೆ ಸಿಕ್ಕು ನಲುಗುವ ಹಾಗಿದ್ದಾಳೆ ಹುಷಾರಾಗಿರಲಿ
ಹೊಸ ವಿಸ್ತಾರದ ಎತ್ತರವ ಅರಸುತ್ತ ಹೊರಟ ಈ ಕಾಲದ ಮಗಳವಳು
ಮನದಾಸೆ ಬತ್ತದೆ ಮುಂದೆ ನಡೆವ ನಾಯಕಿ ಆಗಿದ್ದಾಳೆ. ಹುಷಾರಾಗಿರಲಿ
ಮಂಗಳನಂಗಳದ ಕನಸಿನ ಕೂಸವಳು ನಮ್ಮ ನಾಡಿನ ಭರವಸೆಯು
ತನ್ನ ಕಲ್ಲು ಮುಳ್ಳಹಾದಿಯ ನಡುವೆ ಸಿಲುಕಿ ಬಾಗಿದ್ದಾಳೆ ಹುಷಾರಾಗಿರಲಿ
ಗಲ್ಲಿಗಲಿಯಲಿ ಹಿಡಿದು ಮುಕ್ಕಲು ನಿಂತ ಕರಾಳ ಹಸ್ತಗಳು ಯಯಾ
ವಸ್ತ್ರಾಪಹರಣದಿ ಸೀರೆ ಈವ ದೈವ ಅರಸುತ್ತ ಸಾಗಿದ್ದಾಳ ಹುಷಾರಾಗಿರಲಿ
ವೈ.ಎಂ.ಯಾಕೊಳ್ಳಿ