ಹೆಚ್. ಎಸ್. ಪ್ರತಿಮಾ ಹಾಸನ್ ಕವಿತೆ-ಮೌನ ಮುರಿಯುತಲಿ

ತಾ ದೊಡ್ಡವ ನೀ ಚಿಕ್ಕವ
ಎನ್ನದಿರು ಜೀವನವು ಕ್ಷಣಿಕವು
ಯಾರೊಂದಿಗೂ ಜಗಳವಾಡದೆ
ಸ್ನೇಹ ಪ್ರೀತಿಯಲ್ಲಿ ನಡೆಯುತಿರು……

ಅಂತರದ ಬದುಕು ಎಲ್ಲಿಯೂ ನೋಡ
ಮಾತನಾಡದಲೇ ಕೂರಲು ಬೇಡ
ಇತರರನ್ನು ದೂಶಿಸಲು ಹೋಗದಿರು
ಮೌನವನು ಮುರಿಯುತಲಿ ಬಾಳುತಿರು……

ದೇವ ಕೊಟ್ಟ ಜನ್ಮ ಬಾಂಧವ್ಯದಿ ಬಾಳು
ಮತ್ತೆ ಸಿಗಲಾರದ ಮನುಜಜನ್ಮವು ಇದು
ದೂರವಾದ ಮೇಲೆ ನೆನೆಯಬೇಡ
ಆ ಕ್ಷಣ ಬರದಂತೆ ತಾಳ್ಮೆಯಲಿ ನೋಡಿಕೊ……

ಹಪ ಹಪಿಸಬೇಕು ನಿನ್ನ ಒಲವಿಗಾಗಿ
ನಿನ್ನ ಪ್ರೀತಿ ಸಂಕುಲದ ನೆರಳಿಗಾಗಿ
ಜ್ಞಾನಾರ್ಜನೆ ಯಾರ ಸ್ವತ್ತು ಅಲ್ಲ
ಒಳ್ಳೆಯ ನಡತೆ ಎಲ್ಲರಿಗೂ ಬೇಕಲ್ಲ……

ದಯಮಾಡಿ ಸಂತಸದಿ ಬಾಳಿ ಎಲ್ಲ
ಯಾರ ಮೇಲೂ ದ್ವೇಷ ಮಾಡಬೇಡಿ ಮೆಲ್ಲ
ಇದರಿಂದ ಸಾಧನೆ ಏನು ಮಾಡುವುದಿಲ್ಲ
ಇನ್ನೊಬ್ಬರನ್ನು ತುಳಿಯುವುದು ಬಿಡಿರೆಲ್ಲ ……

ಕೊಂಚ ನಾಜೂಕು ಮನಸು ತಿಳಿಯಿರಿ
ಸ್ವಾಭಿಮಾನಕ್ಕೆ ಪೆಟ್ಟು ತಡೆಯುವುದಿಲ್ಲ ಕೇಳಿರಿ
ಅವಮಾನಿಸಿದರೆ ನಿಮಗೂ ಆಗುವುದು ಒಂದು ದಿನ
ಮರೆಯದೆ ಬಾಳಿ ಸ್ವರ್ಗವಾಗುವುದು ಪ್ರತಿದಿನ……


Leave a Reply

Back To Top