ಇಂದಿರಾ ಮೋಟೆಬೆನ್ನೂರ ಕವಿತೆ-ನೀ ಬಂದಾಗಲೇ

ನನ್ನ ಮನಮಲ್ಲಿಗೆಗೆ ಮೃಗಾಂಕ
ಮುತ್ತಿಟ್ಟಾಗಲೆ ಪರಿಮಳದ…
ಸೊಡರು….

ನನ್ನ ನಗುವಿಗೆ ಶಶಾಂಕ
ಮಗುವಾದಾಗಲೆ
ಕಿಲಕಿಲದ ಸೊಬಗು…

ನನ್ನ ಪ್ರೀತಿಗೆ ತಿಂಗಳ
ಅರಳಿದಾಗಲೇ
ಚೆಂಬೆಳಕ ಬೆಡಗು…

ನನ್ನ ಸ್ನೇಹಕೆ ಶಶಿ
ಮಿಡಿದಾಗಲೇ
ಹುಣ್ಣಿಮೆ ಸೊಗಡು..

ನನ್ನ ಕವನಕೆ ಚಂದ್ರ
ಕಣ್ಬೆಳಕು ಹರಿಸಿದಾಗಲೇ
ಹರುಷದ ಉಸಿರು..

ನನ್ನ ಖುಷಿಗೆ ಬೆಳದಿಂಗಳು
ಬಣ್ಣ ಬಳಿದಾಗಲೇ
ಕಾಮನಂಬಿನ ಬೆಳಕು..

ನನ್ನ ಪುಟ್ಟ ಗೂಡಿಗೆ
ನೀನು ಅಡಿಯಿಟ್ಟಾಗಲೇ
ನಯನ ನೂರು ನವಿಲಗಣ್ಣು …


Leave a Reply

Back To Top