ಶಿವಮ್ಮ ಎಸ್.ಜಿ. ಕವಿತೆ-ಬಾಲ ಗೋಪಾಲ:—–

ಬಾ ಬಾ ಬಾ ಬಾಲಗೋಪಾಲ.
ಬಾ ಬಾ ಬಾ ಕೃಷ್ಣ ಗೋಪಾಲ.
ಬಾ ನನ್ನ ಬಾಲ ಗೋವಿಂದ.
ಬಾರೋ
ಬಾ ಕೃಷ್ಣ ಮುಕುಂದ.

ಬಾರೋ ನೀ ಯಮುನಾ
ನದಿ ಸ್ನಾನಕ್ಕೆ
ಗೋಪಿಕೆಯರ
ಸಂಗಡ ನಲಿಯಲಿಕ್ಕೆ.
ಆಡುತ್ತಾ, ಆಡುತಾ ಹಾಡಲಿಕ್ಕೆ.
ಹಕ್ಕಿಯ ಹಾಗೆ ಹಾರಾಡಲಿಕ್ಕೆ.
ಬಾ ಬಾ ಬಾಲ ಗೋಪಾಲ.
ಬಾರೋ ಬಾರೋ ಕೃಷ್ಣ ಗೋಪಾಲ.

ಗೋಕುಲ ದೊಳಗೆ ಆಡೋಣ.
ನಂದನ ಮನೆಗೆ ಹೋಗೋಣ.
ಬೆಣ್ಣೆಯ ನಾವು ಮೆಲ್ಲೋಣ.
ಚಂದದಿ ಎಲ್ಲಾ ಕೂಡೋಣ.
ಬಾ ಬಾ ಬಾ ಬಾಲ ಗೋಪಾಲ.
ಬಾ ಬಾ ಬಾ ಕೃಷ್ಣ ಗೋಪಾಲ.

ಅಮ್ಮನ ಮುದ್ದಿನ ಕಂದನೆ ನೀನು.
ನಮ್ಮಯ ಮೆಚ್ಚಿನ ಚಂದನವು.
ನಮ್ಮಯ ಆಟಕೆ ಸುಂದರ ನೀನು.
ನಮ್ಮಯ ಗೆಲುವಿನ ಬಂಧುರವು.
ಬಾ ಬಾ ಬಾ ಬಾಲಗೋಪಾಲ.
ಬಾರೋ ಬಾರೋ ಕೃಷ್ಣ ಗೋಪಾಲ.


Leave a Reply

Back To Top