ಕಾವ್ಯ ಸಂಗಾತಿ
ನಾಗಪ್ಪ ಸಿ ಬಡ್ಡಿ
ನನ್ನ ನಾ ಗೆಲ್ಲಲು
ಹೋರಾಡಬೇಕಿದೆ ಯಾರ
ವಿರುದ್ದವೂ ಅಲ್ಲ
ನನ್ನ ನಾ ಗೆಲ್ಲಲು !
ಕಟ್ಟಿಹಾಕಬೇಕಿದೆ
ಮನಸ್ಸಿನ ಮರ್ಕಟತೆಯನ್ನು
ಗಳಿಸಬೇಕಿದೆ ಉತ್ತಮ
ಸಂಸ್ಕಾರ ಸಂಪತ್ತನ್ನು !
ಗಟ್ಟಿಗೊಳಿಸಬೇಕಿದೆ
ವ್ಯಾಯಾಮ -ಯೋಗದಿಂದ
ಮೈ ಮನಗಳನ್ನು !
ಬಾಳಿ ಬದುಕಬೇಕಿದೆ
ಬುದ್ದ-ಬಸವ-ಗಾಂಧಿ
ಹಾದಿಯಲ್ಲಿ !
ಸಾಗಬೇಕಿದೆ
ಅರಿಷಡ್ವರ್ಗಗಳ ದಾಟಿ
ಮುಕ್ತಿಯ ಮಾರ್ಗದೆಡೆಗೆ !
ಅದಕ್ಕಾಗಿ ಹೋರಾಲೇಬೇಕಿದೆ
ನನ್ನ ನಾ ಗೆಲ್ಲಲು !
ನಾಗಪ್ಪ ಸಿ ಬಡ್ಡಿ
ತುಂಬಾ ಚೆನ್ನಾಗಿದೆ ಸರ್
ತುಂಬಾ ಚೆನ್ನಾಗಿದೆ ಇಂತಹ ಹಲವು ಕವಿತೆ ಹೊರಹೋಮಲಿ ಗೆಳೆಯ
ಸುಪರ್ ಕವಿತೆ
ಚೆನ್ನಾಗಿ ಕವಿತೆ ಮೂಡಿ ಬಂದಿದೆ ಸರ್
ನಿನ್ನಲ್ಲಿರುವ ಪ್ರತಿಭೆ ಇನ್ನೂ ಹೆಚ್ಚಿನದಾಗಿ ಹೊರಬರಲಿ ಗೆಳೆಯ
sir
Very nice sir
Super one sir
Super Kavitae Anna ri
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ಕವಿತೆ ಒಳ್ಳೆದಾಗಲಿ
ಇದೆ ರೀತಿ ನಿಮ್ಮಲ್ಲಿರುವ ಪ್ರತಿಭೆ ಹೊರಬಂದು ಕನ್ನಡಿಗರು ಹೆಮ್ಮೆಪಡುವಂತಾಗಲಿ ಗುರುಗಳೇ
ಧನ್ಯವಾದಗಳು ಸರ್