ಕಾವ್ಯ ಸಂಗಾತಿ
ಸುಕುಮಾರ
ಹೊಸ ಕವಿತೆ
ಗಜಲ್
ದೇವರು ಕಾಣದ ವಿಧವೆಯರು ದೇವದಾಸಿಗಳಾದರು
ಮರ್ಮವ ಅರಿಯದ ಅಬಲೆಯರು ದೇವದಾಸಿಗಳಾದರು
ಸಾಮಾಜಿಕ ಶೋಷಣೆಗೆ ಹೆಣ್ಣುಗಳೇ ಬಲಿಪಶುಗಳು
ಪೈಶಾಚಿಕತೆ ಪ್ರಶ್ನಿಸದ ಮಾನಿನಿಯರು ದೇವದಾಸಿಗಳಾದರು
ವ್ಯವಸ್ಥೆಯ ಅವಸ್ಥೆಗೆ ವ್ಯಥೆ ಪಡುತ್ತಿರುವರು
ಅಭಿಸಾರಿಕೆ ಸಾರವನ್ನರಿಯದ ಮುಗ್ಧೆಯರು ದೇವದಾಸಿಗಳಾದರು
ಬೇಲಿಯೇ ಎದ್ದು ಹೊಲ ಮೇಯ್ದಿದೆ ಇಲ್ಲಿ
ಮೌಢ್ಯದ ಜಾಲದಲ್ಲಿರುವ ನೀರೆಯರು ದೇವದಾಸಿಗಳಾದರು
ಹೋರಾಡುವ ಮನಗಳಿಗೆ ಕರಜೋಡಿಸಬೇಕು ಸರ್ವರು
ಭವಿಷ್ಯವ ತಿಳಿಯದ ವನಿತೆಯರು ದೇವದಾಸಿಗಳಾದರು
ಸುಕುಮಾರ