ಕಾಡಜ್ಜಿ ಮಂಜುನಾಥ ಕವಿತೆ-ಮುಂಜಾನೆಯ ರಂಗು

ಮುಂಜಾವಿನಲಿ ಶುಕಪಿಕಗಳ
ಚಿಲಿಪಿಲಿ ರಾಗ ,
ರವಿಯ ಕೆಂಬಣ್ಣದ
ಭಾನಯಾಗ,
ಹೂಗಳು ಅರಳುವ
ಸಮಯ,
ಸೂರ್ಯನಿಗೆ ನಮಿಸುವ
ಹೃದಯ,
ಬಾನಲಿ ಬಣ್ಣ ಬಣ್ಣದ
ಅಲಂಕಾರ,
ಭುವಿಗೆ ಹರಿದಿದೆ ಬೆಳಕಿನ
ಚಿತ್ತಾರ,
ಮಂಜಿನ ಹನಿಗಳು ಹೊಳೆಯುವ
ಘಳಿಗೆ,
ಗಿಡಮರಗಳಿಗೆ ಶಕ್ತಿವರ್ಧಕ


ಸಿಹಿ ಹೋಳಿಗೆ,
ದನಕರುಗಳ ಜೋಗುಳದ
ಹಾಡಿಗೆ,
ದೈವದ ಗಂಟೆ ನಾದಗಳ
ಕೇದಿಗೆ,
ಮನುಜರ ನಿತ್ಯ ಕರ್ಮಗಳು
ಬಾಳಿಗೆ
ನಿಸರ್ಗದಿ ಹೊಸತನವು
ಬದುಕಿಗೆ ;


2 thoughts on “ಕಾಡಜ್ಜಿ ಮಂಜುನಾಥ ಕವಿತೆ-ಮುಂಜಾನೆಯ ರಂಗು

Leave a Reply

Back To Top