ಕಾವ್ಯ ಸಂಗಾತಿ
ಸುಕನಸು
ಗಜಲ್
ಭೋಗದ ವಿಷಯವಷ್ಟೆ ನಾನವನ ದೃಷ್ಟಿಯಲ್ಲಿ
ಹೆಂಗಸಿನ ನಿಕಾಯವಷ್ಟೆ ನಾನವನ ದೃಷ್ಟಿಯಲ್ಲಿ
ನನ್ನೊಲವ ಹಾರೈಕೆಗಳು ಕಾಣಲಿಲ್ಲ ಅವನಿಗೆ
ಸುರತದ ಆನಂದವಷ್ಟೆ ನಾನವನ ದೃಷ್ಟಿಯಲ್ಲಿ
ಅಕ್ಕರೆಯ ಮಾತುಗಳು ಕೇಳಿಸಲಿಲ್ಲ ಅವನಿಗೆ
ದಿಗಂಬರ ಶರೀರವಷ್ಟೆ ನಾನವನ ದೃಷ್ಟಿಯಲ್ಲಿ
ನನ್ನ ಪ್ರೀತಿಯ ನಡೆ ಅರಿವಾಗಲಿಲ್ಲ ಅವನಿಗೆ
ಕಾಮ ವಿನೋದವಷ್ಟೆ ನಾನವನ ದೃಷ್ಟಿಯಲ್ಲಿ
ಅನುಪಮ ಸುಮ ಪರಿಮಳ ಪಸರಿಸಿದ್ದೆ ತಪ್ಪಾ
ಬಿಡುವಿನ ಚೆಲ್ಲಾಟವಷ್ಟೆ ನಾನವನ ದೃಷ್ಟಿಯಲ್ಲಿ
ಸುಕನಸು