ಕಾವ್ಯ ಸಂಗಾತಿ
ಡಾ. ಬಸಮ್ಮ ಗಂಗನಳ್ಳಿ-
ಹೊಸವರುಷದ ನವೋಲ್ಲಾಸ
ಆರಂಭವು ಹೊಸ ಆರಂಭವು
ನವಚೇತನದ ನವೋಲ್ಲಾಸವು
ಭಾವ ವಿಭಾವ ಅನುಭಾವದ
ಅಮೃತದ ಸವಿಗಾನವು..
ಜಿನುಗುತಿರಲಿ ಪ್ರೀತಿ ಸೆಲೆಯು
ಮಾಗಿದ ಮನದಲಿ ನಿತ್ಯವೂ
ಉಕ್ಕೇರಿ ಹರಿಯಲು ಬಿಡಿ
ಸ್ನೇಹ ಕಡಲ ತೆರೆಗಳು..
ನಾಳೆಯ ದಿನಕಿಂದಿನ
ದಿನವೇ ಲೇಸು ಬಾಳಿಗೆ
ಭವಿತವ್ಯದ ಚಿಂತೆ
ಬೇಡ ಎಂದಿಗೂ..
ವಾಸ್ತವದ ಈ ಸ್ಥಿತಿಯೇ
ನಿಜ ಸುಖದಾನಂದವು
ಇದ ತಿಳಿದು ನಡೆದಿರೆ
ನೆಮ್ಮದಿಯು ಕಣ್ಮುಂದೆ..
ಈ ಪ್ರಕೃತಿಯ ಚಲುವನು
ಕಣ್ಮನಗಳಿಗೆ ತುಂಬಿಸುತ
ಇರಬೇಕು ಒಳಗೊಳಗೆ
ಪರಮ ಪ್ರೇಮಾನಂದದಿ..
ಬಂದಂತಹ ಕಷ್ಟಕಾರ್ಪಣ್ಯಕೆ
ನಿರಾಳತೆಯೊಂದೇ ಕ್ರಮವು ನಸುನಗುತಲಿ ಸಾಗುವುದು
ಇದುವೇ ಜೀವನ ಸಾರವು..
ಡಾ. ಬಸಮ್ಮ ಗಂಗನಳ್ಳಿ