ಕಾವ್ಯಸಂಗಾತಿ
ರಾಜೇಶ್ವರಿ ಎಸ್. ಹೆಗಡೆ
ಹೊಸ ವರ್ಷದ ಸಡಗರ
ಬಂದಿತು ಹೊಸತು ವರ್ಷವು
ತರಲದು ಹೊಸತು ಹರ್ಷವ
ಮುಖದಲ್ಲಿ ನಗುವನು ತರಲಿ
ಹೃದಯದಲಿ ಒಲವ ಹರಿಸಲಿ
ಹೊಸ ಸಂಕಲ್ಪಕ್ಕೆ ನಾಂದಿಹಾಡುವ
ಅಡೆ ತಡೆಗಳ ದಾಟಿ ನಡೆಯುವ
ಕರುನಾಡಿಗೆ ಹಣತೆಯ ಹಚ್ಚುವ
ಎಲ್ಲರಿಗೂ ಶುಬಾಶಯ ಕೋರುವ.
ಹೊಸ ವರುಷದ ಹರುಷದಲಿ
ಹಳೆ ನೋವು ಮಾಸಿ ಹೋಗಲಿ
ಸಂಭ್ರಮ ಸಡಗರವು ತುಂಬಲಿ
ನೆಮ್ಮದಿ ಜೀವನ ನಿಮ್ಮದಾಗಲಿ
ಹಳೆಯ ವರ್ಷಕೆ ವಿಧಾಯವು
ಹೊಸತು ವರ್ಷಕೆ ಸ್ವಾಗತವು
ಸೃಷ್ಟಿ ಕರ್ತನ ನಿಯಮವಿದು
ಸಂಭ್ರಮದಿ ಬರಮಾಡುವೆವು
ರಾಜೇಶ್ವರಿ ಎಸ್. ಹೆಗಡೆ.