ಕುವೆಂಪು ನೆನಪಿನಲ್ಲಿ
ಸುಜಾ಼ತಾ ರವೀಶ್
ಕನ್ನಡದ ದ್ರಷ್ಟಾರ
.
ಕುಪ್ಪಳ್ಳಿಯ ಪುಟ್ಟಪ್ಪನೆಂಬ ಪೋರ
ಕನ್ನಡಕ್ಕೆ ಆಲದಂತೆ ಬೆಳೆದ ಹೆಮ್ಮರ
ಉಳಿದಿಲ್ಲ ಬರೆದಿರದ ಸಾಹಿತ್ಯ ಪ್ರಕಾರ
ಚರಿತ್ರೆಯದು ಕೆತ್ತಿಟ್ಟಂತೆ ಅಜರಾಮರ
ನಾಡು ನುಡಿಯ ಪ್ರಗತಿಯ ಹರಿಕಾರ
ಟೊಂಕ ಕಟ್ಟಿ ಸೇವೆಗೆ ನಿಂತ ನೇತಾರ
ಪದಗಳನ್ನು ಹೆಣೆದು ನೇಯ್ದ ನೇಕಾರ
ಭುವನೇಶ್ವರಿಯ ಮುಕುಟದ ಅಲಂಕಾರ
ಪ್ರೀತಿ ದೇಶಪ್ರೇಮ ಪ್ರಕೃತಿ ಅಧ್ಯಾತ್ಮವಿಚಾರ
ಕರ್ನಾಟಕರತ್ನ ,ಪಂಪ ಪ್ರಶಸ್ತಿ ಪುರಸ್ಕಾರ
ಅನ್ವರ್ಥನಾಮ ಜಗದ ಕವಿ ಯುಗದ ಕವಿ
ಅರಸಿ ಬಂದಿತು ಬಲು ಗೌರವದ ರಾಷ್ಟ್ರಕವಿ
ತಾಯ್ನುಡಿಯ ಏಳಿಗೆ ಕನಸು ಕಂಡ ದ್ರಷ್ಟಾರ
ನವ ಅಲೆಯ ಹೊಸ ಗಾಳಿಯ ಸ್ರಷ್ಟಾರ
ಕನ್ನಡದುನ್ನತಿಯ ಸುದ್ದಿಯ ಖಚಿತ ವಕ್ತಾರ
ಕವಿವರ್ಯ ನಿಮಗಿದೋ ಸಾಷ್ಟಾಂಗ ನಮಸ್ಕಾರ
ಒಪ್ಪಿಸಿಕೊಳ್ಳಿ ಈ ಅಜ್ಞಳ ಪದಗಳ ಹಾರ
ಸುಜಾತಾ ರವೀಶ್
ಸೂಕ್ತ ಸುಂದರ ಚಿತ್ರಗಳೊಂದಿಗೆ ಅತ್ಯುತ್ತಮ ವಿನ್ಯಾಸದಲ್ಲಿ ನನ್ನ ಕವಿತೆ ಪ್ರಕಟಿಸಿರುವ ಸಂಪಾದಕರಾದ ಮಧುಸೂದನವರಿಗೆ ಹೃತ್ಪೂರ್ವಕ ಧನ್ಯವಾದಗಳು
ಸುಜಾತಾ ರವೀಶ್