ಕಾವ್ಯ ಸಂಗಾತಿ
ರವೀಂದ್ರ ಎಸ್
ಸಿಂಪಿಕನ್ನಡ_ವರ್ಣಮಾಲೆ
ಸ್ವರಗಳಿಂದ ಕವನ ರಚನೆ
ಅಮ್ಮನ ಕೈ ತುತ್ತನ ಸವಿಯೋಣ
ಆಡುತ ಬಾಲ್ಯವನು ಕಳೆಯೋಣ
ಇರುವುದರಲ್ಲಿ ಸಂತಸ ಕಾಣೋಣ
ಈಜಾಡುತ ನಲಿಯುತ ಬಾಳೋಣ
ಉತ್ಸಾಹದಿಂದ ನಗುತಾ ಇರೋಣ
ಊಟವ ಸವಿದು ಬಲಿಷ್ಠರಾಗೋಣ
ಋಷಿಯಂತೆ ಬಾಳ್ವೆಯ ನಡೆಸೋಣ
ಎಲೆಮರಿ ಕಾಯಿಯಂತೆ ಬದುಕೋಣ
ಏರಿಳಿತ ಬಂದರೂ ಹೆದರದಿರೋಣ
ಐಶ್ವರ್ಯಕ್ಕೆ ಆಸೆಯ ಪಡದಿರೋಣ
ಒಗ್ಗಟ್ಟಿನಿಂದ ಕಾಯಕ ಮಾಡೋಣ
ಓರೆಕೋರೆಗಳ ಅರಿತು ಸಾಗೋಣ
ಔದಾರ್ಯ ಎಲ್ಲರಿಗೂ ತೋರೋಣ
ಅಂದದ ಜೀವನ ಚಂದಗೋಳಿಸೋಣ
ರವೀಂದ್ರ ಎಸ್ ಸಿಂಪಿ