ಸದೃಢ ಮೈಕಟ್ಟು,ಎತ್ತರದ ನಿಲುವು,ನೀಳವಾದ ಮೂಗು,ಕಣ್ಣುಗಳು ಸೂರ್ಯನ ತೇಜಸ್ಸನ್ನುಹೊಲುತ್ತಿದ್ದವು.ಇವೆಲ್ಲ ದೇವಕಿಯ ಮನಸ್ಸನ್ನು ಅಲುಗಾಡಿಸಿ ಬಿಟ್ಟಿದ್ದವು.
ಹೀಗಾಗಿ ಅವಳು ರಾಜನ ಕುರಿತು ಬರೆದ ಒಂದು ಹನಿಗವನ ಇದು…

“ಚಂದಿರನ ಮೋಗದಲಿ
ಸೂರ್ಯಕಾಂತಿಯ ತೇಜಸ್ಸು
ಮನ್ಮಥನ ಮೈಕಟ್ಟು
ನಿನ್ನ ಬಣ್ಣಿಸಲು ನಲ್ಲ
ಶಬ್ದಗಳೇ ಸಿಗುತ್ತಿಲ್ಲ”

ಎಂಬ ಕವನ ಬರೆದು ಅವನಿಗೆ ಕಳಿಸುತ್ತಾಳೆ ದೇವಕಿ.ರಾಜನು ಅದನ್ನು ನೋಡಿ, ಓದಿ ತುಂಬಾ ಖುಷಿ ಪಟ್ಟು, ತಕ್ಷಣ ಅವನು ಫೋನ್ ಮಾಡಿ ಮಾತನಾಡುವ ಮೂಲಕ ಪರಸ್ಪರ ಸಂತೋಷವನ್ನು ಹಂಚಿಕೊಳ್ಳುತ್ತಾರೆ.
ಹೀಗೆ ಇಬ್ಬರೂ ಕಾಫೀ ತಿಂಡಿ, ಊಟ ಇವೆಲ್ಲ ಮಾತನಾಡುವ ಮೂಲಕ ಹಂಚಿಕೊಳ್ಳುತ್ತಿದ್ದರು.
ರಾಜನು ಅವಳ ಆಫೀಸ್ ಬಿಟ್ಟ ಮೇಲೆ ದಿನಾಲೂ ಮಾಡುವ ಹಾಗೆ 6.30 ರ ಸುಮಾರು ಕಾಲ್ ಮಾಡುತ್ತಾನೆ. ಹಾಗೆ ಮಾತನಾಡುತ್ತ, ದೇವಕಿ ತಾನು ಕೆಲವು ದಿನಗಳ ಮಟ್ಟಿಗೆ ರಜೆಯ ಮೇಲೆ ಊರಿಗೆ ಹೊರಟಿರುವೆ ಎಂದಾಗ, ಯಾಕೆ ಈಗ  ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ದೇವಕಿಯ ಪ್ರತ್ಯುತ್ತರ ಅಣ್ಣನ ಮದುವೆ ಇರುವುದಾಗಿ 1 ವಾರ ಹೋಗುವ ವಿಷಯ ತಿಳಿಸುತ್ತಾಳೆ. ಆಗ ರಾಜನು ಮನದಲ್ಲೇ ಬೇಸರ ಪಟ್ಟುಕೊಂಡು. ಹೌದಾ ಯಾವಾಗ ಹೋಗುತ್ತೀರಿ ಎಂದು ಕೇಳಿದಾಗ, ನಾಳೆ ಅಂತ ಹೇಳುತ್ತಾಳೆ.
ಇಬ್ಬರ ಮನದಲ್ಲಿ ಒಂದೇ ಯೋಚನೆ ಈಗ ತಾನೇ ಪರಿಚಯವಾಗಿದೆ.ಇನ್ನೂ ಮಾತು ಸಹ ಸರಿಯಾಗಿ  ಶುರುವಾಗಿ, ಒಬ್ಬರಿಗೊಬ್ಬರು ಭೇಟಿ ಸಹ ಆಗಿಲ್ಲ. ಅಂತದರಲ್ಲಿ ಇದೇನು ಇಂತಹ ವೇದನೆ ಅಂತ ಇಬ್ಬರ ಹೃದಯದ ಮಾತುಗಳು ಕೇಳಿ ಬರತೊಡಗಿದವು. ಆದರೂ ಅನಿವಾರ್ಯ ಹೋಗಿ ಬನ್ನಿ ಎಂದು ಒಲ್ಲದ ಮನಸ್ಸಿನಿಂದ ರಾಜನು ದೇವಕಿಗೆ ಹೇಳಿದ. ಆ ಮಾತಿಗೆ ಆಯಿತು ಎನ್ನುತ್ತಾಳೆ.
ಆಗ ರಾಜ ನಂದೊಂದು ಮಾತು ಅಂತಾನೆ. ದೇವಕಿ ಏನು ಹೇಳಿ ಎಂದಾಗ, ನಾಳೆ ನೀವು ಊರಿಗೆ ಹೋಗುವ ಮೊದಲು ದೇವಸ್ಥಾನಕ್ಕೆ ಬನ್ನಿ  ಸಾಯಿಬಾಬಾ ಅವರ ಜಾತ್ರೆ ಇದೆ ಅದಕ್ಕೆ ನೀವು ಬಂದು ದರ್ಶನ ಪಡೆದು, ಪ್ರಸಾದ ತೊಗೊಂಡು ಹೋಗಬೇಕು ಎನ್ನುತ್ತಾನೆ. ಓಹ್ ಹೌದಾ ಸರಿ ನನ್ನ ಸ್ನೇಹಿತೆಯ ಜೊತೆ ಬಂದು ಹೋಗುತ್ತೇನೆ ಎನ್ನುತ್ತಾಳೆ…


         ರಾಜ ಮತ್ತು ದೇವಕಿ ಇಬ್ಬರ ಮನದಲ್ಲಿ ರಾತ್ರಿ ಕಳೆದು ಯಾವಾಗ ಬೆಳಕು ಆಗುತ್ತೋ ಅಂತ ನಿದ್ದೆ ಮಾಡದೇ ಕಾಯುತ್ತಿದ್ದರು. ಅಂತೂ ಕತ್ತಲು ಕಳೆದು ಬೆಳಕಾಯಿತು.
ದೇವಕಿ ಬೇಗನೆ ಎದ್ದು, ಸರಸರನೆ ತನ್ನ ಕೆಲಸ ಕಾರ್ಯಗಳನ್ನ ಮುಗಿಸಿ, ರೆಡಿ ಆಗುತ್ತಾಳೆ. ದೇವಕಿ ಮತ್ತು ಅವಳ ಸ್ನೇಹಿತೆ ಇಬ್ಬರು ಸೇರಿ ದೇವಸ್ಥಾನಕ್ಕೆ ಹೋಗುತ್ತಾರೆ. ಇವರಿಬ್ಬರೂ ಹೋಗುವಷ್ಟರಲ್ಲಿ ರಾಜನು ದೇವಕಿಗಿಂತ ಮುಂಚೆ ಬಂದು ಅವಳಿಗಾಗಿ ಕಾಯುತ್ತ ನಿಂತಿರುತ್ತಾನೆ.ದೇವಸ್ಥಾನದ ಮುಂಬಾಗಿಲನ್ನು ದಾಟಿ ಮುಂದೆ ಹೋಗುವಷ್ಟರಲ್ಲಿ ರಾಜನು ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿ ಮಿಂಚುತ್ತಾ  ಇರುವುದನ್ನು ನೋಡಿ ಮುಗುಳು ನಗೆ ಬೀರುತ್ತಾ ಇದ್ದಳು. ಏಕೆಂದರೆ ಅವಳು ಅವತ್ತು ಹಾಕಿರುವ ಡ್ರೆಸ್ ಕೂಡ ವೈಟ್ ಆಗಿತ್ತು. ಅವರಿಬ್ಬರೂ ಮನದಲ್ಲಿ ಅಂದುಕೊಂಡರು ನಮ್ಮಿಬ್ಬರ ಭಾವನೆ,ಮನಸ್ಸು,ಇಷ್ಟವಾದ ಉಡುಗೆ ಎಲ್ಲವೂ ಒಂದೇ ಆಗಿದೆ ಅಂತ ತುಂಬಾ ಖುಷಿ ಪಡುತ್ತಾರೆ


ದೇವಕಿ ಮತ್ತು ರಾಜ ಇಬ್ಬರು ಅಲ್ಲಿ ಬಹಳ ಜನ ಇರುವುದರಿಂದ ಪರಸ್ಪರ ಕಣ್ಣುಗಳಲ್ಲೇ ಮಾತನಾಡುತ್ತಾರೆ. ಆ ದಿನ ದೇವಕಿಗೆ ಪ್ರಸಾದ ರೂಪದಲ್ಲಿ ಸಿಕ್ಕಿದ್ದು ತೆಂಗಿಕಾಯಿ, ಬಾಳೆಹಣ್ಣು,ಕಲ್ಲುಸಕ್ಕರೆ, ಮಲ್ಲಿಗೆ ಹೂವಿನಮಾಲೆ. ಇದು ದೇವಕಿಗೆ ನನ್ನ ಮತ್ತು ರಾಜನ ಪ್ರೀತಿಗೆ ಶುಭ ಸಂಕೇತವೆಂದು ತಿಳಿದು, ದೇವರ ದರ್ಶನ ಪಡೆದು, ದೇವಸ್ಥಾನದಿಂದ ಹೊರಬರುತ್ತಾಳೆ.
ಆಮೇಲೆ ದೇವಕಿ ತನ್ನ ಊರಿಗೆ ಹೋಗಿ ಬರುವುದಾಗಿ ಕಣ್ಣಸನ್ನೆಯ ಮೂಲಕ ರಾಜನಿಗೆ ತಲುಪಿಸಿ, ಭಾರವಾದ ಹೆಜ್ಜೆ ಇಡುತ್ತಾ ಹೊರಟೇ ಬಿಡುತ್ತಾಳೆ. ರಾಜನ ಮುಖ ಸಪ್ಪಗಾಗಿದ್ದನ್ನು ಗಮನಿಸಿದ ದೇವಕಿ, ಬಸ್ ನಲ್ಲಿ ಕುಳಿತ ತಕ್ಷಣ ಫ್ರೀ ಇದ್ದಾಗ ಕಾಲ್ ಮಾಡುತ್ತೇನೆ ಎಂದು ಸಂದೇಶ ಕಳಿಸುವ ಮೂಲಕ ವಿಷಯ ಮುಟ್ಟಿಸುತ್ತಾಳೆ.

ಕಥೆ ಮುಂದೆ ಏನಾಗುತ್ತೆ ಅಂತ ನಾವು ನೀವೆಲ್ಲ ಕಾದು ನೋಡೋಣ.


Leave a Reply

Back To Top