ಡಾ ಅನ್ನಪೂರ್ಣಾ ಹಿರೇಮಠ ಗಜಲ್ ಡಾ.ಅನ್ನಪೂರ್ಣಾ ಹಿರೇಮಠ

Change alignmentReplace



ಬರಿದಾದ ಈ ಬಾಳಲಿ ಬೆಳಕಂತೆ ಬಂದು ಮರೆಯಾಗಿ ಹೋದೆಯಾ
ಕಾಲಿಯಿದ್ದ ಮನದಲಿ ನೂರು ಆಸೆ ತಂದು ದೂರವಾಗಿ ಹೋದೆಯಾ

ನಮ್ಮಯ ಪ್ರೇಮ ಸಂಬಂಧದ ಒಡನಾಟ ಶಿವನಿಗೂ ಒಪ್ಪಲಿಲ್ಲವೇನು
ಸಂಭ್ರಮದ ಗಳಿಗೆಗಳ ಅನುಭವಿಸದೆ ಇಂದು ಕಾಣದಾಗಿ ಹೋದೆಯಾ

ಸವಿ ಮಾತುಗಳ ಹೊನಲಿನ ಸಂಗೀತ ಸರಿಗಮಿಸಲು ಆಗಲಿಲ್ಲವೇನು
ಒಲವಿನಾಳದ ಸಾವಿರ ಮಿಡಿತಗಳ ತಿಂದು ಮೂಕವಾಗಿ ಹೋದೆಯಾ

ಅರೆಗಳಿಗೆ ಬಿಟ್ಟಿರಲಾರದ ಸಂಬಂಧ ಜೀವಕೂ ಇಷ್ಟವಾಗಲಿಲ್ಲವೇನು
ಪ್ರೇಮದ ಸುಧೆಯನು ಸವಿಜೇನಂತೆ ಸುರಿದು ಸಾಕಾಗಿ ಹೋದೆಯಾ

ಅಂತರಾತ್ಮದಿ ಬೆರೆತ ನೆನಪುಗಳ ಹಾಗೆ ಅಚ್ಚಾಗಿಸಲು ತಿಳಿಯಲಿಲ್ಲವೇನು
ಅನುರಾಗದ ಅಲೆಯಲಿ ನದಿಯಂತೆ ಹರಿದು ಬಯಲಾಗಿ ಹೋದೆಯಾ

ಭಾವಾಂತರಾಳದ ಬಯಕೆ ಹಂದರವ ಮುರಿಯದೆ ಇರಲಾಗಲಿಲ್ಲವೇನು
ನೊಂದ ಬೆಂದ ಜೀವಕೆ ಔಷಧಿಯಂತೆ ಬೆಂದು ಬೇಗೆಯಾಗಿ ಹೋದೆಯಾ

ಅನುಳ ಮನದಲರಳಿದ ಮಲ್ಲಿಗೆ ಕೆರಳಿಸಿ ಬಾಡಿಸದೆ ಬಿಡಲಾಗಲಿಲ್ಲವೇ
ಹೃದಯ ಮಂದಿರದಲಿ ದೇವನಂತೆ ನಿಂದು ಮಾಯವಾಗಿ ಹೋದೆಯಾ


One thought on “ಡಾ ಅನ್ನಪೂರ್ಣಾ ಹಿರೇಮಠ ಗಜಲ್ ಡಾ.ಅನ್ನಪೂರ್ಣಾ ಹಿರೇಮಠ

  1. ಸುಂದರ ಗಝಲ್……ನನ್ನ ಒಂದು ಪ್ರಶ್ನೆ ಪ್ರತಿ ಶೇರ್ ನ ಮೊದಲ ಸಾಲು ಕೊನೆ ಶಬ್ದ ಪ್ರಶ್ನಾರ್ಥಕ ಇರಬೇಕೆ OR ಎರಡನೇ ಶೇರ್ ಮೊದಲ ಸಾಲಿನ ಕೊನೆಯ ಪದ ಪ್ರಶ್ನಾರ್ಥಕ ಇರಬೇಕೆ..
    ಕಾಫಿಯಗಳು ಒಂದೇ ಪದ “ಗಿ”ಇದೆ…
    ಅದಕೆ ಸ್ವಲ್ಪ್ confused… ನಾನು ಕಲಿತಿದ್ದೇನೆ

Leave a Reply

Back To Top