ಲೇಖನ ಸಂಗಾತಿ
ಭಾರತಿ ಕೋರೆ
ಹೆಣ್ಣು
ಹೆಣ್ಣು ಸಂಸಾರದ ಕಣ್ಣು ಅಂತ ಹಿಂದಿನ ಕಾಲದಲ್ಲಿ ಹೇಳುತ್ತಿದ್ದರು. ಏಕೆಂದರೆ ಒಬ್ಬ ಹೆಣ್ಣು ಮಗಳು ಬೆಳೆದು ದೊಡ್ಡವಳಾದ ಮೇಲೆ ಮನೆಯವರು ಗೊತ್ತು ಮಾಡಿದ ಹುಡುಗನನ್ನು ಮದುವೆಯಾಗಿ,
ತಂದೆಯ ಮನೆಯಿಂದ ಗಂಡನ ಮನೆಗೆ ಹೋಗುತ್ತಾಳೆ.ಅಲ್ಲಿ ಎಲ್ಲರೂ ಆಕೆಗೆ ಹೊಸ ಪರಿಚಯ. ಕ್ರಮೇಣ ಅತ್ತೆ,ಮಾವ,ಗಂಡ, ಮಕ್ಕಳು,ಮೈದುನ,ನಾದಿನಿ ಎನ್ನುವ ಗಂಡನ ಸಂಬಂಧಿಕರನ್ನು ತನ್ನವರು ಎಂದು ತಿಳಿದು, ತನ್ನ ಜವಾಬ್ದಾರಿಯನ್ನು ನಿಭಾಯಿಸಿ, ಎಲ್ಲರ ಮನ ಗೆದ್ದು, ಸೈ ಎನಿಸಿಕೊಳ್ಳುತ್ತಾಳೆ.
ಆದರೆ ಅವಳಿಗೂ ಆಸೆ,ಆಕಾಂಕ್ಷೆಗಳು ಇವೆ,ಅವಳನ್ನು ಕೇಳಬೇಕು, ಬೇಡಿಕೆಯನ್ನು ಈಡೇರಿಸಬೇಕು ಎನ್ನುವ ಮಾತನ್ನು,ಅವಳ ಮನಸ್ಸನ್ನು ಯಾರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ.
ಬೆಳಿಗ್ಗೆಯಂದಲೇ ಟೀ,ಕಾಫೀ,ತಿಂಡಿ,
ಊಟದಿಂದ ಶುರುವಾದ ಅವಳ ಕೆಲಸ ರಾತ್ರಿ ಊಟ ಮಾಡಿ ಎಲ್ಲರೂ ಮಳುಗುವವರೆಗೆ ಎಲ್ಲರ ಆಗು ಹೋಗುಗಳನ್ನು ನೋಡಿಕೊಳ್ಳುವ ಸಹನಾಮೂರ್ತಿ ಹೆಣ್ಣು. ಹೆಣ್ಣು ತುಂಬಾ ಸೂಕ್ಷ್ಮ ಮನಸಿನವಳು. ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನು ಸಮಾನ ರೀತಿಯಲ್ಲಿ ನಿಭಾಯಿಸುವ ಸಾಮರ್ಥ್ಯಉಳ್ಳವಳು ಎನ್ನುವುದು ಆಗಿನ ಕಾಲದ ಮಾತು..
ಆದರೆ ಈಗ
“ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲಳು” ಎಂಬಂತೆ ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ಇರುವ ಹಕ್ಕನ್ನು ಕಾಸಿದುಕೊಳ್ಳುತ್ತಿದ್ದವರು, ಮೀಸಲಾತಿ ಅಡಿಯಲ್ಲಿ ಸ್ತ್ರೀಯರಿಗೆ ಅವರದೇ ಆಡ್ ಪ್ರತ್ಯೇಕ ಸ್ಥಾನ ತಾವೇ ಬಿಟ್ಟು ಕೊಡುತ್ತಿದ್ದಾರೆ ಎನ್ನುವುದು ಸಂತೋಷ ಸಂಗತಿ.
ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ,ಇತಿಹಾಸ ಸೃಷ್ಟಿಸಿದ ಅನೇಕ ಮಹಿಳಾಮಣಿಗಳು
ಎನ್ನುವುದು ಈಗ “ಹೆಣ್ಣು ಅಬಲೆಯಲ್ಲ ಸಭಲೆ” ಎಂದು ನಮ್ಮ ಹೆಣ್ಣು ಮಕ್ಕಳು ಸಾಬೀತುಪಡಿಸಿದ್ದಾರೆ.
ಹೆಣ್ಣನ್ನು ಭೋಗದ ವಸ್ತು ಎನ್ನುವ ಗಂಡಸರೇ ಹೆಣ್ಣನ್ನು ದಾರಿ ತಪ್ಪಿಸಿ ತಪ್ಪು ದಾರಿಗೆ ಎಳೆದು,ಕೊನೆಗೆ ಹೆಣ್ಣನ್ನು ದೂಸಿಸುತ್ತಾರೆ.ಆದರೆ ಇನ್ನೂ ಸಹ ಮೋಸದ ಘಟನೆಗಳು ನಮ್ಮ ಸಮಾಜದಲ್ಲಿ ನಡೆಯುತ್ತಿವೆ. ಹೀಗೆ ಪ್ರೀತಿ, ಪ್ರೇಮ ಎನ್ನುವ ಕೆಟ್ಟ ಆಲೋಚನೆ,ಭಾವನೆ ಬಿಟ್ಟು, ಎಲ್ಲ ಹೆಣ್ಣು ಮಕ್ಕಳಿಗೆ ಗೌರವ ಕೊಟ್ಟಿದ್ದೆ ಆದರೆ ನಮ್ಮ ಸಮಾಜದಲ್ಲಿ ಯಾವ ಹೆಣ್ಣು ಮಕ್ಕಳು ರಾಜಾರೋಷವಾಗಿ ಓಡಾಡಲು ಹೆದರಬೇಕಾಗಿಲ್ಲ.
ಸಮಾನ ಕೆಲಸ ಸಮಾನ ವೇತನ ಪಡೆಯಬೇಕು.
ಲಿಂಗ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಒಬ್ಬ ಹೆಣ್ಣು ಎಲ್ಲ ಹೆಣ್ಣು ಮಕ್ಕಳನ್ನು ಹುರಿದುಂಬಿಸಿ ಹೋರಾಟ ಮಾಡಿ ಕೊನೆಗೂ ಜಯಶಾಲಿಯಾಗುತ್ತಾಳೆ. ನಂತರ ಸಚಿವಾಲಯ 2008. ಜನೇವರಿ 24 ರಂದು ಜಾರಿಗೆ ತರುತ್ತದೆ. ಅಂದಿನಿಂದ ರಾಷ್ಟ್ರೀಯ ಮಹಿಳಾ ದಿನವನ್ನು ಆವರಣೆಯನ್ನು ನಾವು ನೀವೆಲ್ಲ ಮಾಡುತ್ತೇವೆ.ಇವತ್ತಿನ ದಿನಗಳಲ್ಲಿ ಹೆಣ್ಣು ಗಂಡಿಗೆ ಯಾವ ಕ್ಷೇತ್ರದಲ್ಲಿಯೂ ಕಡಿಮೆ ಇಲ್ಲ.
ಗೃಹಿಣಿಯಿಂದ ಕೃಷಿ,ಆಟೋ ಚಾಲಕಿಯಿಂದ ಪೈಲೆಟ್ ವರೆಗೆ,ವೈದ್ಯಕೀಯ ಕ್ಷೇತ್ರ,ರಾಜಕೀಯ ಕ್ಷೇತ್ರ ಆಗಿರಬಹುದು ಎಲ್ಲದರಲ್ಲಿ ನಂಬರ್ 1 ಎನಿಸಿಕೊಂಡಿದ್ದಾಳೆ. ಹೆಣ್ಣು ಮನಸ್ಸು ಮಾಡಿದರೆ ಗಂಡನನ್ನು ಉದ್ಧರಿಸಲುಬಹುದು ಸರ್ವನಾಶ ಕೂಡ ಮಾಡಬಹುದು.
ಒಬ್ಬ ಯಶಸ್ವಿ ಪುರುಷನ ಹಿಂದೆ ಒಂದು ಹೆಣ್ಣು ಇದ್ದೆ ಇರುತ್ತಾಳೆ. ಆದ್ದರಿಂದ
ಮಹಿಳಾ ದಿನಾಚರಣೆಯಂದು ಮಾತ್ರ ಗೌರವ ಕೊಡುವುದು ಬೇಡ.ಅವಳಿಗೆ ಗೌರವ ಸಿಗಬೇಕು ಪ್ರತಿ ಕ್ಷಣ,ಪ್ರತಿ ದಿನ ಸಲ್ಲಬೇಕು. ಹೆಣ್ಣು ಮಕ್ಕಳಿಗೆ ಅಷ್ಟೇ ಕಡಿವಾಣ ಹಾಕದೇ,ಪ್ರತಿ ಗಂಡು ಮಕ್ಕಳಿಗೂ ಕಡಿವಾಣ ಹಾಕಿದರೆ ನಮ್ಮ ಸಮಾಜದಲ್ಲಿ ಇನ್ನಷ್ಟು ಬದಲಾವಣೆ ಆಗಬಹುದು.
ಹೆಣ್ಣು ತಾಯಿಯಾಗಿ, ಮಗಳಾಗಿ,ಹೆಂಡತಿಯಾಗಿ, ಅಕ್ಕ,ತಂಗಿಯಾಗಿ, ಹೇಗೆ ಹಲವಾರು ಪಾತ್ರಗಳನ್ನು ನಿಭಾಯಿಸಬಲ್ಲ ಚತುರೆ. ಚೆನ್ನಮ್ಮ, ಓಬ್ಬವ ಹುಟ್ಟಿರುವ ನಮ್ಮ ನಾಡು ಸುಂದರ ಬೀಡು.
ಹೆಣ್ಣು ಸೃಷ್ಟಿಯ ಮೂಲ..
ಹೆಣ್ಣು ಸಂಜೀವಿನಿ..
ಹೆಣ್ಣು ಜಗದ ಕಣ್ಣು..
ಹೆಣ್ಣು ಕರುಣಾಮಯಿ..
ಹೆಣ್ಣು ಅನೇಕ ನದಿಗಳ ರೂಪದಲ್ಲಿ ಇದ್ದಾಳೆ.ಅನೇಕ ದೇವತೆಗಳ ರೂಪದಲ್ಲಿಯೂ ರಾರಾಜಿಸುತ್ತಿರುವಳು.
ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ
ನಮ್ಮ ಸೃಷ್ಟಿಗೆ ಮೂಲ ಕಾರಣವಾಗಿರುವ ಹೆಣ್ಣನ್ನು ರಕ್ಷಿಸಿ,ಗೌರವಿಸಿ..
ಭಾರತಿ ಕೋರೆ…
ಕಥೆ ತುಂಬಾ ಚೆನ್ನಾಗಿದೆ
Super
ಧನ್ಯವಾದಗಳು