ನಳಿನಾ ದ್ವಾರಕನಾಥ್ ಕವಿತೆ-ಮತ್ತೆ ಮೂಡಿತು ಒಲವು

ಮತ್ತೇಕೋ ನಿನ್ನದೇ ನೆನಪು
ಕಾಡುತಿದೆ ಚೆಲುವ
ಅದೆಷ್ಟು ಸಂಭ್ರಮದ ಸವಿಯ
ತುಂಬಿದೆ ಒಲವ

ಅದೇಕೋ ಕಾಣೆ ಕಣ್ತುಂಬಿದೆ
ನಿನ್ನ ಆ ರೂಪ
ನಿನ್ನ ಮುಗ್ಧತನವೇ ಬಿಂಬಿಸಿತು
ಕಾಣಲಿಲ್ಲ ಕೋಪ

ಅದೇನು ಮೋಡಿ ಮಾಡಿದೆ
ನಿನ್ನ ಒಡನಾಟ
ಮರೆತರೂ ಮರೆಯಲಾಗದ
ಆ ನಿನ್ನ ತುಂಟಾಟ

ಮತ್ತೆ ಬಯಸುತಿದೆ ಮನವು
ನಿನ್ನಯ ಆಗಮನ
ಜೊತೆಯಾಗಿ ಸಾಗುವ ಒಲವಿನಲಿ
ಈ ಬಾಳ ಪಯಣ


Leave a Reply

Back To Top