ಡಾ ಸಾವಿತ್ರಿ ಕಮಲಾಪೂರ ಕವಿತೆ-ಕೆದಕದಿರು ಗೆಳತಿ

ಕೆದಕದಿರು ಗೆಳತಿ
ನನ್ನೆದೆಯ ಎದೆಗೂಡಿನ
ನೋವುಗಳನ್ನೆಲ್ಲ
ಹಾಸಿ ಹೊದ್ದು
ಮಲಗಿಕೊಂಡ
ನೋವುಗಳ
ಕಳೆದ ರಾತ್ರಿಗಳ
ಬಸಿದ ನೋವುಗಳ
ಹಿಂಡಬೇಡ ಗೆಳತಿ
ಕಾಡಿ ಬೇಡಿದೆ
ಒಲವ ಧರೆಯ
ನಲಿವಿನ ಪ್ರೀತಿ
ಬರಸಿಡಿಲು
ಬಡಿದ ಮೊಳೆಗಳ
ಜೀವಂತ ಏಸು
ಸುಳ್ಳುಗಳ ಸರಮಾಲೆ
ಮುಳ್ಳುಗಳ ಕಿರೀಟ
ಅಲಂಕರಿಸಬೇಡ
ಮಾತುಗಳ ಮೆತ್ತಗೆ
ಹರಡಿಸಿದ ಸುಳ್ಳಗಳ
ಅಹೋರಾತ್ರಿಯೆಲ್ಲಾ
ಜಾಗರಣೆ
ನೋವಿನ ಅಂತೆ ಕಂತೆಯೊಳಗೆ
ಸಿಡುಕಿದ ಬಿರುನುಡಿ
ಭಾವಗಳ
ಅಂತೆ ಕಂತೆ
ತೂಗಿರುವೆ
ತಕ್ಕಡಿ ಹಿಡಿದು
ಇರು ಹಾಗೇ
ಸುಮ್ಮನೆ
ಮಲಗಿಕೊಳ್ಳಲಿ
ನನ್ನ ಭಾವ
ನರಳಿಸಬೇಡ
ಕೆದಕದಿರು ಕಳವಳದ ಕಂತೆ
ಇರು ಹಾಗೇ
ಸುಮ್ಮನೇ
ಮಲಗಿ ನಿದ್ರಿಸುವ
ಹಸುಕಂದನಂತೆ

One thought on “ಡಾ ಸಾವಿತ್ರಿ ಕಮಲಾಪೂರ ಕವಿತೆ-ಕೆದಕದಿರು ಗೆಳತಿ

Leave a Reply

Back To Top