ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ದೂರ ನಿಂತು ನೋಡಬೇಕು………
ಹತ್ತಿರ ಬಂದರೆ ಭಾವ
ಕೊರೆಯುವುದು ಜೀವ
ನಾಳೆಯೆಂಬ ಅರಿವ ನವ
ಉತ್ಸಾಹವ ಕದ್ದು ಬಿಟ್ಟ ಹಾವ
ಹಾಗಾಗಿ ದೂರವೇ ಒಳಿತು
ನಿಂತು ನೋಡಲು
ಹತ್ತಿರವಿರಲಿ ದೂರವಿರಲಿ
ಶುಭವಿರಲಿ ಅಪಾಯವಿರಲಿ
ಹತ್ತಿರ ನಿಂತು ನೋಡಬೇಕು
ಎಂದುಕೊಂಡರೂ
ದೂರವೇ ಚೆಂದ ನೋಡಲು
ಎಲ್ಲಿಯವರೆಗೆ ನಿಲುವು ನಮ್ಮದು
ಅದು ಒಂದೊಂದು ಪರಮಾಪ್ತ
ಪ್ರಭಾತಕ್ಕೊಂದು ಸೂರ್ಯೋದಯ
ಪ್ರತಿಯಾಗಿ ಸಂಜೆಗೊಂದು ಅಸ್ತ
ನಡುವೆ ಸಮಚಿತ್ತ ಬದುಕಿಗೆ
ಪ್ರಕಟ ಭಾವಕ್ಕಿಂತ ಅಪ್ರಕಟಿತ ಹೆಚ್ಚು
ಮನದ ಮಾತು ಸಂಬಂಧದಲ್ಲಿ
ಅರ್ಥ ಪ್ರಶ್ನೆ ಉತ್ತರ ಎಲ್ಲವೂ
ಸರಿ ಇದ್ದರೆ ಜಾಗೃತ ಸ್ಥಿತಿ
ದೃಷ್ಟಿ ಸೃಷ್ಟಿ ಎಲ್ಲಕ್ಕಿಂತ ಸಹಜ
ಬದುಕಿನ ನಡೆ ನುಡಿಯುವ ಮಾತು
ಜನ್ಯವಾಗುವ ಕ್ಷಣ ಕಾಲ ದಿನಗಳೊಳಗೆ
ಇಷ್ಟ ಕಷ್ಟದ ಆಪ್ತ ಬದುಕು ಭಾವಗಳು
ಸೋತರೂ ಸೋಲದಿದ್ದರೂ
ಅನುಭವಿಸಬೇಕು ಆರಾಧಿಸಬೇಕು
ಮಾತಿಲ್ಲದ ಮೌನದಿಂದ
ಹಿತದೊಳಗೆ ಸಾಗಬೇಕು
ಆತ್ಮವಾಗಬೇಕು ಅರಿವೊಳಗೆ
ಏನಾದರೂ ನೋಡಬೇಕು ನಗುವನ್ನು ನಗುವಿನೊಳಗೆ ಅಡಗಿದ
ಮಣ್ಣ ಸಗ್ಗವನ್ನು ಬದುಕ ಪರಿಯನ್ನು ಕಣ್ಣ ಕನ್ನಡಿಯಲ್ಲಿ ತಿಳಿವಿಗೆ ಹಾಗೇ
ಮತ್ತೆ ಮತ್ತೆ………….
ನಾಗರಾಜ ಬಿ.ನಾಯ್ಕ
ಸಾಹಿತ್ಯ ಕೊಡುವ ಸುಖವನ್ನು, ದೂರದಿ ನಿಂತು ನೋಡಿ ಅನುಭವಿಸಲಾಗುವುದಿಲ್ಲ. ಅದನ್ನು ಓದಿ ತಿಳಿದುಕೊಳ್ಳಬೇಕು. , ಅನುಭವಿಸಬೇಕು. ಕೆಲವೊಮ್ಮೆ ಕೆಲವನ್ನು ದೂರದಿಂದ ನೋಡಿದಾಗಲೇ ಚಂದ … ಇನ್ನು ಕೆಲವನ್ನು ಸನಿಹದಲ್ಲಿ ನಿಂತು ಅನುಭವಿಸುವುದೇ, ಹಿತವಾಗಿರುತ್ತದೆ. ಮಾತಿನೊಳಗಿನ ಮೌನ, ಮೌನದೊಳಗಿನ ಮಾತು, ಬದುಕಿನ ಖುಷಿಯನ್ನು ಹೆಚ್ಚಿಸುತ್ತದೆ.
ಹೇಳಿದರೂ …ಕೇಳಿದರೂ.. ಹೇಳದೆ, ಕೇಳದೆ ಉಳಿದ ಭಾವ, ಮೀಟುವುದು ಹೃದಯವನ್ನ. ನಗು ಅರಳುವ ಪರಿಗೆ, ಜೀವದೊಲವಿನ ಬೆಸುಗೆ.. ಅನಂತ.. ಮತ್ತೆ ಮತ್ತೆ ಕಾಡುವುದು ಕವಿತೆಯ ಆಂತರ್ಯ. ..
ನಾನಾ ಬಾಡ