ಕಾವ್ಯ ಸಂಗಾತಿ
ಹೆಚ್.ಎಸ್. ಪ್ರತಿಮಾ ಹಾಸನ್
ಮಡಿಲಲ್ಲಿ ಮಗುವಾಗಿ ನೀನು
ಬರಿದಾದ ಮಡಿಲಲ್ಲಿ ಮಗುವಾಗಿ ನೀನು
ತುಂಬಿರಲು ಆನಂದ ಮನಕೆ ಎಲ್ಲೆಡೆಯೂ
ನೊಂದ ಮನಸಿಗೆ ಶಾಂತಿಯ ತುಂಬಿದೆ
ನಕ್ಕು ನಲಿಯುತಿರೆ ನೀನು ಜಗವೆಲ್ಲ ನನ್ನ ಕೈಲಿ……
ಬೆಳಗಾಯಿತೇಳು ಕಂದ ನೀನಿರದ ಜೀವನ
ಎಂದೆಂದೂ ನರಕವೋ, ನೀನಿರಲು ಸಂತಸ
ಬಾಳಿನಲಿ ಆನಂದ, ಮನೆಯೆಲ್ಲ ನೆಮ್ಮದಿ
ಬದುಕಿನಲಿ ನನಗೇನು ಬೇಕಿದೆ ಓ ನನ್ನ ಕಂದ…….
ಸೂರ್ಯನ ಕಿರಣಗಳು ಮನೆಯಲಿ ಬೀಳಲು
ನೀ ಎದ್ದು ಕುಣಿಯುತ ನಲಿಯುತ ಆಡಲು
ನನಗೆ ಏನು ಬೇಕು ಚಿನ್ನ ನೀನಿದ್ದರೆ ಸಾಕಲ್ಲವೆ ರನ್ನ
ನಿನ್ನ ತೊದಲ ಮಾತುಗಳು ಎಷ್ಟು ಚೆನ್ನ……
ತಾಯಾಗಿ ಪಡೆದಿರಲು ಎಲ್ಲವನು ನಾನು
ರಾಣಿಯಾಗಿ ಮೆರೆಯುವೆನು ಎಲ್ಲೆಡೆಯೂ ನಾನು
ನಿನ್ನ ಆರೈಕೆಯಲೆ ಬದುಕುವೆನು ನೋಡು
ಸಂತಸದಿ ಎಲ್ಲೆಡೆಯೂ ನಲಿಯುತಿರೆ ನೀನು…..
ಹೆಚ್.ಎಸ್. ಪ್ರತಿಮಾ ಹಾಸನ್.