ಕಾವ್ಯ ಸಂಗಾತಿ
ಲೋಹಿತೇಶ್ವರಿ ಎಸ್ ಪಿ.
ಭಾವಹೀನನ ಕೂಡೆ
ಭಾವಹೀನನ ಕೂಡೆ
ಭಾವ ಬೆಸೆಯುವ
ಮನಸು
ಭಾವನೆಯ ಸೊಗಸ
ಸವಿಯದ ಮನಸಲಿ
ಭಾವನೆ ಬೇರಿಹುದೇ…?
ಸುಂದರ ಕ್ಷಣಗಳನೆ
ಬದುಕಾಗಿ ರೂಪಿಸುವ
ಮನಕೆ
ಸುಳ್ಳುಗಳ ಮಾಲೆಯಲಿ
ಭಾವ ಕ್ಷೀಣಿಸುವುದ
ಕಂಡು
ಜಗದ ಪರಿಯನು
ಅರಿತು ಭಾವಹೀನವಾಗಿ
ನಿಂತಿದೆ
ಭಾವವೇ ಇಲ್ಲದೆ
ಮನವು ಮೌನವಾಗಿ
ನಿಂತಿದೆ
ಮರುಭೂಮಿಯಲಾದರು
ಹೂ ಅರಳಬಲ್ಲದೇ
ವಿನಃ………
ಭಾವಹೀನನ ಮನಕೆ
ಒಲವಧಾರೆಯನೇ ಎರೆದರೂ
ಫಲನೀಡಬಲ್ಲದೆ?
ಭಾವಹೀನನ ಕೂಡೆ
ಸಂಗ ಸಹಿಸಲಾಗದ
ಸಂಕಟ……..
ರಚನೆ ಲೋಹಿತೇಶ್ವರಿ ಎಸ್ ಪಿ