ಮಧುಸೂದನ ಮದ್ದೂರು ಹಾಗೇ ಸುಮ್ಮನೆ…ಒಂದಿಷ್ಟು ಹನಿಗಳು….

ಮೌನ…
ಧ್ಯಾನದ ಸಂಗಾತಿ
ನಿಶ್ಯಬ್ಧದ ಸಂಗತಿ

ಮಾತು…
ಜಡಿ ಮಳೆ ಸುರಿತ
ವಾಹಿನಿಯ ಸೆಳತ

ಪ್ರೀತಿ…
ಅಂತರಂಗದ ಧ್ಯಾನ
ಬದುಕಿನ ಸಾಮಗಾನ

ದ್ವೇಷ…
ಕೋಪದ ಪ್ರತಿರೂಪ
ತನುವಿಗೆ ಶಾಪ

ಮಮತೆ…
ಸದಾ ತೆರೆದ ಎದೆ
ಬತ್ತದ ಸೊದೆ

ಮಾನವೀಯತೆ…
ಸದಾ ಕಾಡುವ ಕೊರತೆ
ಆಂತರ್ಯದ ಒರತೆ


Leave a Reply

Back To Top