ಮಕ್ಕಳ ಸಂಗಾತಿ
ಕೆ. ವಾಣಿ ಚನ್ನರಾಯಪಟ್ಟಣ
ಶಿಶುಗೀತೆ
ಅಮ್ಮ ಒಮ್ಮೆ ಬಂದು ನೋಡು ನನ್ನ ಪುಟ್ಟ ಕೈತೋಟ
ಅಂದ ಚಂದದ ಬಣ್ಣದ ಹೂಗಳ ನಾನು ಬೆಳೆಸಿದ ಪರಿಪಾಠ
ಬಾಳೆ ಸೀಬೆ ಪರಂಗಿ ಹಣ್ಣನ್ನು ಕಿತ್ತು ತಿನ್ನುವ ಬಾ ಒಮ್ಮೆ
ನಿನಗೆ ಇಷ್ಟದ ಸೊಪ್ಪು ತರಕಾರಿ ಕಿತ್ತು ಕೊಡುವೆನು ಬಾ ಒಮ್ಮೆ
ಬಾಳೆ ಎಲೆಗಳು ಬೀಸುತ ಕರೆದಿವೆ ಹಸಿರು ತೋರಣ ಕಂಡಂತೆ
ಜೊತೆಗೆ ಕಬ್ಬಿನಗರಿಗಳ ಚಂದ ತಲೆಯ ತೂಗಿ ನಲಿದಂತೆ
ಬಣ್ಣ ಬಣ್ಣದ ಗಿಳಿಗಳು ಬಂದು ಹಣ್ಣು ತಿಂದು ಹಾಡಿದವು
ಅದರ ಜೊತೆಗೆ ಚಿಟ್ಟೆಯು ಕೂಡ ನಲಿದು ನೃತ್ಯವ ಮಾಡಿದವು
ತಂಪು ಗಾಳಿ ಮೆಲ್ಲಗೆ ಬಂದು ನನಗೆ ಗುಟ್ಟು ಹೇಳಿದವು
ಕೆರೆಯ ನೀರ ಹೊತ್ತು ತಂದು ನನಗೆ ಜಳಕವ ಮಾಡಿಸಿದವು.
ಕೆ. ವಾಣಿ ಚನ್ನರಾಯಪಟ್ಟಣ
ಮಕ್ಕಳಿಗೆ ಸೂಕ್ತವಾದ ಗೀತೆ