ಕಾವ್ಯ ಸಂಗಾತಿ
ನಾರಾಯಣ ರಾಠೋಡ
ಮೌನಿಯಾಗಿಬಿಡು ಎಲೆ ಮನವೆ!
ಸುಮ್ಮನೆ ನೋಡಬೇಕು ಜಗದಾಟವ
ಸುಮ್ಮನೆ ಕೇಳಬೇಕು ಜನರಾಡುವ ನುಡಿಗಳ
ಕಣ್ಣಿದ್ದೂ ಕುರುಡರಾಗಬೇಕು
ಮಾತು ಬಂದರೂ ಮೌನಿಯಾಗಿರಬೇಕು
ಕೇಳಲು ನೀನಾರು?
ನಿನಗೇಕೆ ಒಳಿತು ಕೆಡಕುಗಳ ಹೇಳುವ ಚಪಲ
ನಿನ್ನದು ನಿನಗೆ ಅವರದು ಅವರಿಗೆ
ಆಗುವುದೆಲ್ಲ ಆಗಲಿಬಿಡು
ನಡೆವುದೆಲ್ಲ ನಡೆಯಲಿ
ತಡೆಯಲು ನೀನಾರು?
ಅವರವರ ಭಾವಕ್ಕೆ ಅವರವರ ಬದುಕು
ಅವರವರ ತಾಳಕ್ಕೆ ಅವರವರ ಹೆಜ್ಜೆ
ಅವರ ನಾಟಕಕ್ಕೆ ಅವರದೇ ಬಣ್ಣ
ಅವರ ಹಾಡಿಗೆ ಅವರದೇ ರಾಗ
ಕೇಳಲು ನೀನಾರು?
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
ಅತ್ತೆಯದು ಅತ್ತೆಗೆ ಸೊಸೆಯದು ಸೊಸೆಗೆ
ಹಳೆಯ ಹಾಡಿಗೆ ಹೊಸರಾಗ ಸಲ್ಲ
ಹೊಸತಕ್ಕೆ ಹಳೆಯ ರಾಗ ಸಲ್ಲ
ಕೇಳಲು ನೀನಾರು?
ಆಟದ ಅಂಗಳ ಅವರದು
ಕುಸ್ತಿಯಾದರೂ ಆಡಲಿ
ಪಗಡೆಯಾದರೂ ಆಡಲಿ
ಸುಸ್ತು ಬಂದಾದರೂ ಬೀಳಲಿ
ಕೇಳಲು ನೀನಾರು?
ಮುಂದೆ ಮಾಡಲು ಬೆಟ್ಟದಷ್ಟು
ಹಿಂದೆ ನೋಡಬೇಡ
ನಿನ್ನ ನೀ ಅವಲೋಕಿಸು
ಅನ್ಯರ ಅಣುಕು ಬೇಡ
ಅನುಭಾವಿಗಳ ಮಾಗ೯ ನೀ ಬಿಡಬೇಡ
ಸುಗಮ ಜೀವನಕ್ಕೆ ಸಾವಿರ ದಾರಿಗಳು!!!
ನಾರಾಯಣ ರಾಠೋಡ
Super lines sir